KSPDO B GRADE

ಸಂಘ / Association
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು
Karnataka State PDO B-Grade Upgradation Association (R), Bengaluru
ನೋಂದಣಿ ಸಂಖ್ಯೆ: DRB4/SOR/420/2023-24
Registration Number: DRB4/SOR/420/2023-24
ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ
Registered under Karnataka Co-operative Societies Act, 1960
ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ
State President: Sri Ramesh Nadageri
ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್
State Vice-President: Sri Jayagouda Patil
ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ
Women Vice-President: Smt. Sridevi Madiwalar

Live

MENU BAR

ಮಾಹಿತಿ ಟಿಕ್ಕರ್‌

ಮಾಹಿತಿ
PDO TOOLS | GP Orders: ಇಲ್ಲಿ ಎಲ್ಲಾ ಆದೇಶಗಳು, ಸುತ್ತೋಲೆಗಳು, ಸರಳ ನಮೂನೆಗಳು ಹಾಗೂ ಕ್ಯಾಲ್ಕುಲೇಟರ್‌ಗಳು ಲಭ್ಯವಿವೆ. ಹಿಂದಿನ ಮಾಹಿತಿಗಳು ಸಹ ವಿಷಯವಾರು ಲಭ್ಯವಿದ್ದು ಅಧಿಕೃತ ಸದಸ್ಯರು ಬಳಸಿಕೊಳ್ಳಬಹುದು. 👉 ಬಲಭಾಗದಲ್ಲಿ ಈ ಸಾಲು ಕೆಳಗೆ ಲಭ್ಯವಿರುವ ಆಯ್ಕೆಯನ್ನು ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು
ಜಿಲ್ಲಾಧ್ಯಕ್ಷರು
1. ಬೆಂಗಳೂರು ನಗರ: ಶ್ರೀ ಧನಂಜಯ್ [ಬೆಂಗಳೂರು ವಿಭಾಗ]
2. ಬೆಂಗಳೂರು ಗ್ರಾಮಾಂತರ: ಶ್ರೀ ಸತೀಶ್ [ಬೆಂಗಳೂರು ವಿಭಾಗ]
3. ರಾಮನಗರ: ಶ್ರೀ ರವಿ.ಎನ್ [ಬೆಂಗಳೂರು ವಿಭಾಗ]
4. ಕೋಲಾರ: ಶ್ರೀ ಮೊಹನ್ ಕುಮಾರ್ [ಬೆಂಗಳೂರು ವಿಭಾಗ]
5. ಚಿಕ್ಕಬಳ್ಳಾಪೂರ: ಶ್ರೀ ಚಂದ್ರಶೇಖರ.G.W [ಬೆಂಗಳೂರು ವಿಭಾಗ]
6. ತುಮಕೂರು: ಶ್ರೀ ಜುಂಜೇಗೌಡ [ಬೆಂಗಳೂರು ವಿಭಾಗ]
7. ಶಿವಮೊಗ್ಗ: ಶ್ರೀ ಚಿದಾನಂದ [ಬೆಂಗಳೂರು ವಿಭಾಗ]
8. ದಾವಣಗೆರೆ: ಶ್ರೀ ಜಯಕುಮಾರ್‌ ಡಿ.ಆರ್ [ಬೆಂಗಳೂರು ವಿಭಾಗ]
9. ಚಿತ್ರದುರ್ಗ: ಶ್ರೀ ನಾಗರಾಜ ಜಿ [ಬೆಂಗಳೂರು ವಿಭಾಗ]
10. ಮೈಸೂರು: ಶ್ರೀ ಗೋಪಾಲ ಕೃಷ್ಣಾ [ಮೈಸೂರು ವಿಭಾಗ]
11. ಮಂಡ್ಯ: ಶ್ರೀ ಲವ. ಎನ್ [ಮೈಸೂರು ವಿಭಾಗ]
12. ಹಾಸನ: ಶ್ರೀ ಮಂಜುನಾಥ [ಮೈಸೂರು ವಿಭಾಗ]
13. ಚಾಮರಾಜನಗರ: ಶ್ರೀ ಸಿದ್ಧರಾಜು [ಮೈಸೂರು ವಿಭಾಗ]
14. ದಕ್ಷಿಣ ಕನ್ನಡ: ಶ್ರೀ ಮುತ್ತಪ್ಪ [ಮೈಸೂರು ವಿಭಾಗ]
15. ಉಡುಪಿ: ಶ್ರೀ ಗೀರಿಶ್ [ಮೈಸೂರು ವಿಭಾಗ]
16. ಚಿಕ್ಕಮಗಳೂರು: ಶ್ರೀ ವಿಶ್ವನಾಥಯ್ಯ [ಮೈಸೂರು ವಿಭಾಗ]
17. ಕೊಡಗು: ಶ್ರೀ ಪುಟ್ಟರಾಜು [ಮೈಸೂರು ವಿಭಾಗ]
18. ಬೆಳಗಾವಿ: ಶ್ರೀ ರವಿಕಾಂತ್ CM [ಬೆಳಗಾವಿ ವಿಭಾಗ]
19. ಧಾರವಾಡ: ಶ್ರೀ ಪರುಶುರಾಮ ಕವಲೂರು [ಬೆಳಗಾವಿ ವಿಭಾಗ]
20. ವಿಜಯಪುರ: ಶ್ರೀ ಬಸನಗೌಡ ಚೌದ್ರಿ [ಬೆಳಗಾವಿ ವಿಭಾಗ]
21. ಬಾಗಲಕೋಟೆ: ಶ್ರೀ ಸಿದ್ಧು ಬಿರದಾರ [ಬೆಳಗಾವಿ ವಿಭಾಗ]
22. ಗದಗ: ಶ್ರೀ ಸಂತೋಷ ಹೆಚ್‌ [ಬೆಳಗಾವಿ ವಿಭಾಗ]
23. ಹಾವೇರಿ: ಶ್ರೀ ಭೋಜರಾಜ [ಬೆಳಗಾವಿ ವಿಭಾಗ]
24. ಉತ್ತರ ಕನ್ನಡ: ಶ್ರೀ ಗೀರಿಶ್ [ಬೆಳಗಾವಿ ವಿಭಾಗ]
25. ಕಲಬುರ್ಗಿ: ಶ್ರೀ ರಾಜೇಶ್ವರಿ ಸಾಹು [ಕಲಬುರ್ಗಿ ವಿಭಾಗ]
26. ಬೀದರ್: ಶ್ರೀ ಚಂದ್ರಶೇಖರ ಬನ್ನಾಳೆ [ಕಲಬುರ್ಗಿ ವಿಭಾಗ]
27. ರಾಯಚೂರು: ಶ್ರೀ‌ ಸಿ.ಹೆಚ್ ಮುದಕಪ್ಪ [ಕಲಬುರ್ಗಿ ವಿಭಾಗ]
28. ಕೊಪ್ಪಳ: ಶ್ರೀ ವಿರೇಶ್.G.A [ಕಲಬುರ್ಗಿ ವಿಭಾಗ]
29. ಯಾದಗಿರಿ: ಶ್ರೀ ಮಲ್ಲಣ್ಣ ಮಾಳೂರು [ಕಲಬುರ್ಗಿ ವಿಭಾಗ]
31. ವಿಜಯನಗರ: ಶ್ರೀ ನವೀನಕುಮಾರ್ ಆರ್‌ ಡಿ [ಕಲಬುರ್ಗಿ ವಿಭಾಗ]

Search This Blog

26 January 2026

ಗ್ರಾಮ ಪಂಚಾಯಿತಿಗಳಿಗೆ ಕೆರೆ ಹಸ್ತಾಂತರ ಪ್ರಕ್ರಿಯೆ: ಸರ್ಕಾರದ ಮಟ್ಟದಲ್ಲೇ ಉಳಿದ ಪ್ರಸ್ತಾವನೆ?

ಗ್ರಾಮ ಪಂಚಾಯಿತಿಗಳಿಗೆ ಸಣ್ಣ ಕೆರೆಗಳ ಹಸ್ತಾಂತರ ಪ್ರಸ್ತಾವನೆಗೆ ಗ್ರಹಣ: ಸರ್ಕಾರದ ಮಟ್ಟದಲ್ಲೇ ಬಾಕಿ

ಕೆರೆಗಳ ಅಭಿವೃದ್ಧಿ
ಊಹಾತ್ಮಕ ಚಿತ್ರ

ಬೆಂಗಳೂರು: ರಾಜ್ಯಾದ್ಯಂತ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿರುವ, 100 ಎಕರೆಗಿಂತ ಕಡಿಮೆ ವಿಸ್ತೀರ್ಣ ಹೊಂದಿರುವ ಕೆರೆಗಳನ್ನು ಗ್ರಾಮ ಪಂಚಾಯಿತಿಗಳಿಗೆ (ಗ್ರಾಪಂ) ಹಸ್ತಾಂತರಿಸುವ ಯೋಜನೆಗೆ ಗ್ರಹಣ ಹಿಡಿದಿದೆ. ಅಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ಈ ಪ್ರಮುಖ ಪ್ರಸ್ತಾವನೆಯು ಸರ್ಕಾರದ ಮಟ್ಟದಲ್ಲೇ ಬಾಕಿಯ ಉಳಿದಿದೆ.

ಯೋಜನೆಯ ಹಿನ್ನೆಲೆ ಮತ್ತು ಉದ್ದೇಶ

ಅಂತರ್ಜಲ ವೃದ್ಧಿ, ಕೆರೆಗಳ ಒತ್ತುವರಿ ತಡೆಗಟ್ಟುವುದು ಹಾಗೂ ಸಂರಕ್ಷಣೆಯ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿತ್ತು. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಸುಮಾರು 3,850ಕ್ಕೂ ಅಧಿಕ ಕೆರೆಗಳನ್ನು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ 2023ರಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಇದು ಅನುಷ್ಠಾನಕ್ಕೆ ಬಂದಿಲ್ಲ.

ಪ್ರಮುಖ ಅಂಶಗಳು

  • ಕೆರೆಗಳ ಸಂಖ್ಯೆ: ರಾಜ್ಯದಲ್ಲಿ ಒಟ್ಟು 10,582 ಕೆರೆಗಳಿದ್ದು, ಅದರಲ್ಲಿ 3,850 ಕೆರೆಗಳು 100 ಎಕರೆಗಿಂತ ಕಡಿಮೆ ವಿಸ್ತೀರ್ಣ ಹೊಂದಿವೆ.
  • ಸಂಕಷ್ಟದಲ್ಲಿ ಕೆರೆಗಳು: ದಶಕಗಳಿಂದ ಹೂಳೆತ್ತದಿರುವುದು, ಒತ್ತುವರಿ ಮತ್ತು ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಈ ಕೆರೆಗಳು ಅಳಿವಿನ ಅಂಚಿನಲ್ಲಿವೆ. ರೈತರು ಕೆರೆಗೆ ಬರುವ ನೀರು ಹರಿಯುವ ಮಾರ್ಗಗಳನ್ನು ಮುಚ್ಚಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
  • ಅರ್ಧಕ್ಕೇ ನಿಂತ ಯೋಜನೆಗಳು: 2018-19ರಲ್ಲಿ 'ಕೆರೆ ಸಂಜೀವಿನಿ' ಯೋಜನೆಗೆ 100 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಕೋವಿಡ್ ಮತ್ತು ಅತಿವೃಷ್ಟಿಯ ಕಾರಣಗಳಿಂದಾಗಿ ಈ ಯೋಜನೆ ಅರ್ಧದಲ್ಲೇ ಮೊಟಕುಗೊಂಡಿದೆ.

ಕೆರೆಗಳ ಅಂದಾಜು ವಿವರ

ಕೆರೆಯ ವಿಧ ವಿಸ್ತೀರ್ಣ ಸಂಖ್ಯೆ
ದೊಡ್ಡ ಕೆರೆಗಳು 100 ಎಕರೆ ಮೇಲ್ಪಟ್ಟು 3,239
ಮಧ್ಯಮ ಕೆರೆ 50 ಎಕರೆ ಮೇಲ್ಪಟ್ಟು 3,760
ಸಣ್ಣ ಕೆರೆ 25 ಎಕರೆ ಮೇಲ್ಪಟ್ಟು 8,432
ಅತಿ ಸಣ್ಣ ಕೆರೆಗಳು 1 ರಿಂದ 15 ಎಕರೆ 12,345

ಅಧಿಕಾರಿಗಳ ಪ್ರತಿಕ್ರಿಯೆ

ಸಣ್ಣ ನೀರಾವರಿ ಇಲಾಖೆಯ ಜಿಲ್ಲಾ ಮುಖ್ಯ ಎಂಜಿನಿಯರ್ ಗುರುಬಸವರಾಜ ಬಿ.ಎಂ.: "ಕೆರೆಗಳ ಹಸ್ತಾಂತರದ ಪ್ರಸ್ತಾವನೆಯನ್ನು ಈಗಾಗಲೇ ಸಲ್ಲಿಸಲಾಗಿದೆ, ಆದರೆ ಸರ್ಕಾರದ ಅಧಿಕೃತ ಆದೇಶಕ್ಕಾಗಿ ಕಾಯುತ್ತಿದ್ದೇವೆ."

ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂದೆ: "ನರೇಗಾ ಅಡಿಯಲ್ಲಿ ಕೆರೆ ಅಭಿವೃದ್ಧಿಪಡಿಸಲು ಚರ್ಚೆಗಳು ನಡೆದಿವೆ, ಅಂತಿಮ ನಿರ್ಧಾರ ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ."

No comments:

Post a Comment