KSPDO B GRADE

ಸಂಘ / Association
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು
Karnataka State PDO B-Grade Upgradation Association (R), Bengaluru
ನೋಂದಣಿ ಸಂಖ್ಯೆ: DRB4/SOR/420/2023-24
Registration Number: DRB4/SOR/420/2023-24
ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ
Registered under Karnataka Co-operative Societies Act, 1960
ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ
State President: Sri Ramesh Nadageri
ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್
State Vice-President: Sri Jayagouda Patil
ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ
Women Vice-President: Smt. Sridevi Madiwalar

Live

MENU BAR

ಮಾಹಿತಿ ಟಿಕ್ಕರ್‌

ಮಾಹಿತಿ
PDO TOOLS | GP Orders: ಇಲ್ಲಿ ಎಲ್ಲಾ ಆದೇಶಗಳು, ಸುತ್ತೋಲೆಗಳು, ಸರಳ ನಮೂನೆಗಳು ಹಾಗೂ ಕ್ಯಾಲ್ಕುಲೇಟರ್‌ಗಳು ಲಭ್ಯವಿವೆ. ಹಿಂದಿನ ಮಾಹಿತಿಗಳು ಸಹ ವಿಷಯವಾರು ಲಭ್ಯವಿದ್ದು ಅಧಿಕೃತ ಸದಸ್ಯರು ಬಳಸಿಕೊಳ್ಳಬಹುದು. 👉 ಬಲಭಾಗದಲ್ಲಿ ಈ ಸಾಲು ಕೆಳಗೆ ಲಭ್ಯವಿರುವ ಆಯ್ಕೆಯನ್ನು ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು
ಜಿಲ್ಲಾಧ್ಯಕ್ಷರು
1. ಬೆಂಗಳೂರು ನಗರ: ಶ್ರೀ ಧನಂಜಯ್ [ಬೆಂಗಳೂರು ವಿಭಾಗ]
2. ಬೆಂಗಳೂರು ಗ್ರಾಮಾಂತರ: ಶ್ರೀ ಸತೀಶ್ [ಬೆಂಗಳೂರು ವಿಭಾಗ]
3. ರಾಮನಗರ: ಶ್ರೀ ರವಿ.ಎನ್ [ಬೆಂಗಳೂರು ವಿಭಾಗ]
4. ಕೋಲಾರ: ಶ್ರೀ ಮೊಹನ್ ಕುಮಾರ್ [ಬೆಂಗಳೂರು ವಿಭಾಗ]
5. ಚಿಕ್ಕಬಳ್ಳಾಪೂರ: ಶ್ರೀ ಚಂದ್ರಶೇಖರ.G.W [ಬೆಂಗಳೂರು ವಿಭಾಗ]
6. ತುಮಕೂರು: ಶ್ರೀ ಜುಂಜೇಗೌಡ [ಬೆಂಗಳೂರು ವಿಭಾಗ]
7. ಶಿವಮೊಗ್ಗ: ಶ್ರೀ ಚಿದಾನಂದ [ಬೆಂಗಳೂರು ವಿಭಾಗ]
8. ದಾವಣಗೆರೆ: ಶ್ರೀ ಜಯಕುಮಾರ್‌ ಡಿ.ಆರ್ [ಬೆಂಗಳೂರು ವಿಭಾಗ]
9. ಚಿತ್ರದುರ್ಗ: ಶ್ರೀ ನಾಗರಾಜ ಜಿ [ಬೆಂಗಳೂರು ವಿಭಾಗ]
10. ಮೈಸೂರು: ಶ್ರೀ ಗೋಪಾಲ ಕೃಷ್ಣಾ [ಮೈಸೂರು ವಿಭಾಗ]
11. ಮಂಡ್ಯ: ಶ್ರೀ ಲವ. ಎನ್ [ಮೈಸೂರು ವಿಭಾಗ]
12. ಹಾಸನ: ಶ್ರೀ ಮಂಜುನಾಥ [ಮೈಸೂರು ವಿಭಾಗ]
13. ಚಾಮರಾಜನಗರ: ಶ್ರೀ ಸಿದ್ಧರಾಜು [ಮೈಸೂರು ವಿಭಾಗ]
14. ದಕ್ಷಿಣ ಕನ್ನಡ: ಶ್ರೀ ಮುತ್ತಪ್ಪ [ಮೈಸೂರು ವಿಭಾಗ]
15. ಉಡುಪಿ: ಶ್ರೀ ಗೀರಿಶ್ [ಮೈಸೂರು ವಿಭಾಗ]
16. ಚಿಕ್ಕಮಗಳೂರು: ಶ್ರೀ ವಿಶ್ವನಾಥಯ್ಯ [ಮೈಸೂರು ವಿಭಾಗ]
17. ಕೊಡಗು: ಶ್ರೀ ಪುಟ್ಟರಾಜು [ಮೈಸೂರು ವಿಭಾಗ]
18. ಬೆಳಗಾವಿ: ಶ್ರೀ ರವಿಕಾಂತ್ CM [ಬೆಳಗಾವಿ ವಿಭಾಗ]
19. ಧಾರವಾಡ: ಶ್ರೀ ಪರುಶುರಾಮ ಕವಲೂರು [ಬೆಳಗಾವಿ ವಿಭಾಗ]
20. ವಿಜಯಪುರ: ಶ್ರೀ ಬಸನಗೌಡ ಚೌದ್ರಿ [ಬೆಳಗಾವಿ ವಿಭಾಗ]
21. ಬಾಗಲಕೋಟೆ: ಶ್ರೀ ಸಿದ್ಧು ಬಿರದಾರ [ಬೆಳಗಾವಿ ವಿಭಾಗ]
22. ಗದಗ: ಶ್ರೀ ಸಂತೋಷ ಹೆಚ್‌ [ಬೆಳಗಾವಿ ವಿಭಾಗ]
23. ಹಾವೇರಿ: ಶ್ರೀ ಭೋಜರಾಜ [ಬೆಳಗಾವಿ ವಿಭಾಗ]
24. ಉತ್ತರ ಕನ್ನಡ: ಶ್ರೀ ಗೀರಿಶ್ [ಬೆಳಗಾವಿ ವಿಭಾಗ]
25. ಕಲಬುರ್ಗಿ: ಶ್ರೀ ರಾಜೇಶ್ವರಿ ಸಾಹು [ಕಲಬುರ್ಗಿ ವಿಭಾಗ]
26. ಬೀದರ್: ಶ್ರೀ ಚಂದ್ರಶೇಖರ ಬನ್ನಾಳೆ [ಕಲಬುರ್ಗಿ ವಿಭಾಗ]
27. ರಾಯಚೂರು: ಶ್ರೀ‌ ಸಿ.ಹೆಚ್ ಮುದಕಪ್ಪ [ಕಲಬುರ್ಗಿ ವಿಭಾಗ]
28. ಕೊಪ್ಪಳ: ಶ್ರೀ ವಿರೇಶ್.G.A [ಕಲಬುರ್ಗಿ ವಿಭಾಗ]
29. ಯಾದಗಿರಿ: ಶ್ರೀ ಮಲ್ಲಣ್ಣ ಮಾಳೂರು [ಕಲಬುರ್ಗಿ ವಿಭಾಗ]
31. ವಿಜಯನಗರ: ಶ್ರೀ ನವೀನಕುಮಾರ್ ಆರ್‌ ಡಿ [ಕಲಬುರ್ಗಿ ವಿಭಾಗ]

Search This Blog

27 January 2026

ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯ 'ಬಿ ಖಾತಾ' ಆಸ್ತಿಗಳಿಗೆ 'ಎ ಖಾತಾ' ಭಾಗ್ಯ: ಹೊಸ ನಿಯಮಗಳು ಪ್ರಕಟ!

ನಗರಸಭೆ, ಪುರಸಭೆ ನಿವಾಸಿಗಳಿಗೆ ಸಿಹಿ ಸುದ್ದಿ: 'ಬಿ' ಖಾತಾ ಆಸ್ತಿಗಳನ್ನು 'ಎ' ಖಾತಾ ಮಾಡಲು ಮಾರ್ಗಸೂಚಿ ಪ್ರಕಟ

ಬೆಂಗಳೂರು: ರಾಜ್ಯದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರ ದೊಡ್ಡ ರಿಲೀಫ್ ನೀಡಿದೆ. ಅನಧಿಕೃತ ಬಡಾವಣೆಗಳಲ್ಲಿರುವ ನಿವೇಶನ ಮತ್ತು ಕಟ್ಟಡಗಳನ್ನು ಕಾನೂನುಬದ್ಧಗೊಳಿಸಿ 'ಎ ಖಾತಾ' ನೀಡಲು ಮಹತ್ವದ ಮಾರ್ಗಸೂಚಿಯನ್ನು ಹೊರಡಿಸಿದೆ.

ನಗರಾಭಿವೃದ್ಧಿ ಇಲಾಖೆಯ ಈ ನಿರ್ಧಾರದಿಂದಾಗಿ ವರ್ಷಗಳಿಂದ 'ಬಿ ಖಾತಾ' ಇಟ್ಟುಕೊಂಡು ತೆರಿಗೆ ಪಾವತಿಸುತ್ತಿದ್ದ ಮಾಲೀಕರು ಇನ್ನು ಮುಂದೆ ಪೂರ್ಣ ಪ್ರಮಾಣದ ಹಕ್ಕು ದಾಖಲೆಗಳನ್ನು ಪಡೆಯಲು ಹಾದಿ ಸುಗಮವಾಗಿದೆ.

'ಎ' ಖಾತಾ ಪಡೆಯಲು ಈ 6 ನಿಯಮಗಳು ಕಡ್ಡಾಯ

  • ಸಾರ್ವಜನಿಕ ರಸ್ತೆ ಸಂಪರ್ಕ: ಆಸ್ತಿಗೆ ತಲುಪಲು ಕಡ್ಡಾಯವಾಗಿ ಸಾರ್ವಜನಿಕ ರಸ್ತೆ ಇರಬೇಕು. ಖಾಸಗಿ ರಸ್ತೆಯಾಗಿದ್ದರೆ, ಅದನ್ನು ಸ್ಥಳೀಯ ಸಂಸ್ಥೆಗಳು ಮೊದಲು 'ಸಾರ್ವಜನಿಕ ರಸ್ತೆ' ಎಂದು ಅಧಿಕೃತವಾಗಿ ಘೋಷಿಸಬೇಕು.
  • ಭೂ ಪರಿವರ್ತನೆಗೆ ಸರಳ ಅವಕಾಶ: ಕೃಷಿ ಭೂಮಿ ಎಂದು ದಾಖಲೆ ಹೊಂದಿರುವ ಆಸ್ತಿಗಳನ್ನು ನಿಗದಿತ ಶುಲ್ಕ ಪಾವತಿಸಿ ಕೃಷಿಯೇತರ ಉದ್ದೇಶಕ್ಕೆ (DC Conversion) ಪರಿವರ್ತಿಸಿಕೊಳ್ಳಲು ಈ ಮಾರ್ಗಸೂಚಿಯಲ್ಲಿ ಸರಳೀಕೃತ ಅವಕಾಶ ನೀಡಲಾಗಿದೆ.
  • ಡೆಡ್‌ಲೈನ್ ನಿಗದಿ: ಈ ಸೌಲಭ್ಯವು ಕೇವಲ ಸೆಪ್ಟೆಂಬರ್ 10, 2024ಕ್ಕಿಂತ ಮೊದಲು ನೋಂದಣಿಯಾಗಿರುವ ಆಸ್ತಿಗಳಿಗೆ ಮಾತ್ರ ಅನ್ವಯಿಸಲಿದೆ.
  • ಉಲ್ಲಂಘನೆಗೆ ನೋ ಎ ಖಾತಾ: ಸರ್ಕಾರದ ವಲಯ ನಿಯಮಗಳನ್ನು (Zonal Regulations) ಸಂಪೂರ್ಣವಾಗಿ ಮೀರಿ ಕಟ್ಟಲಾದ ಕಟ್ಟಡಗಳಿಗೆ ಯಾವುದೇ ಕಾರಣಕ್ಕೂ ಎ ಖಾತಾ ನೀಡುವುದಿಲ್ಲ. ಅಂತಹವುಗಳಿಗೆ 'ಬಿ ಖಾತಾ' ಮಾತ್ರ ಮುಂದುವರಿಯಲಿದೆ.
  • ಫ್ಲ್ಯಾಟ್ ಮಾಲೀಕರಿಗೂ ಅವಕಾಶ: ಸರಿಯಾದ ಅನುಮೋದನೆ ಪಡೆಯದ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಕೊಂಡವರು ಕೂಡ ಅಗತ್ಯ ದಂಡ ಅಥವಾ ಶುಲ್ಕ ಪಾವತಿಸಿ 'ಎ ಖಾತಾ' ಪಡೆದುಕೊಳ್ಳಬಹುದು.
  • ಅರ್ಜಿ ಪ್ರಕ್ರಿಯೆ: ಆಸ್ತಿ ಮಾಲೀಕರು ಮೊದಲು ಸಂಬಂಧಪಟ್ಟ ಪ್ರಾಧಿಕಾರದಿಂದ ನಿವೇಶನ ವಿನ್ಯಾಸಕ್ಕೆ (Layout Plan) ಅನುಮೋದನೆ ಪಡೆಯಬೇಕು. ಬಳಿಕವಷ್ಟೇ ತಮ್ಮ ವ್ಯಾಪ್ತಿಯ ನಗರಸಭೆ ಅಥವಾ ಪುರಸಭೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಸರ್ಕಾರದ ಉದ್ದೇಶ: ನಗರ ಪ್ರದೇಶಗಳಲ್ಲಿ ಅಸ್ತವ್ಯಸ್ತವಾಗಿ ಬೆಳೆಯುತ್ತಿರುವ ಅಕ್ರಮ ಬಡಾವಣೆಗಳಿಗೆ ಲಗಾಮು ಹಾಕುವುದರ ಜೊತೆಗೆ, ಸ್ಥಳೀಯ ಸಂಸ್ಥೆಗಳ ಆರ್ಥಿಕ ಮೂಲವನ್ನು ಬಲಪಡಿಸುವುದು ಸರ್ಕಾರದ ಈ ಯೋಜನೆಯ ಪ್ರಮುಖ ಗುರಿಯಾಗಿದೆ.

No comments:

Post a Comment