KSPDO B GRADE

ಸಂಘ / Association
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು
Karnataka State PDO B-Grade Upgradation Association (R), Bengaluru
ನೋಂದಣಿ ಸಂಖ್ಯೆ: DRB4/SOR/420/2023-24
Registration Number: DRB4/SOR/420/2023-24
ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ
Registered under Karnataka Co-operative Societies Act, 1960
ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ
State President: Sri Ramesh Nadageri
ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್
State Vice-President: Sri Jayagouda Patil
ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ
Women Vice-President: Smt. Sridevi Madiwalar

Live

MENU BAR

ಜಿಲ್ಲಾಧ್ಯಕ್ಷರು
1. ಬೆಂಗಳೂರು ನಗರ: ಶ್ರೀ ಧನಂಜಯ್ [ಬೆಂಗಳೂರು ವಿಭಾಗ]
2. ಬೆಂಗಳೂರು ಗ್ರಾಮಾಂತರ: ಶ್ರೀ ಸತೀಶ್ [ಬೆಂಗಳೂರು ವಿಭಾಗ]
3. ರಾಮನಗರ: ಶ್ರೀ ರವಿ.ಎನ್ [ಬೆಂಗಳೂರು ವಿಭಾಗ]
4. ಕೋಲಾರ: ಶ್ರೀ ಮೊಹನ್ ಕುಮಾರ್ [ಬೆಂಗಳೂರು ವಿಭಾಗ]
5. ಚಿಕ್ಕಬಳ್ಳಾಪೂರ: ಶ್ರೀ ಚಂದ್ರಶೇಖರ.G.W [ಬೆಂಗಳೂರು ವಿಭಾಗ]
6. ತುಮಕೂರು: ಶ್ರೀ ಜುಂಜೇಗೌಡ [ಬೆಂಗಳೂರು ವಿಭಾಗ]
7. ಶಿವಮೊಗ್ಗ: ಶ್ರೀ ಚಿದಾನಂದ [ಬೆಂಗಳೂರು ವಿಭಾಗ]
8. ದಾವಣಗೆರೆ: ಶ್ರೀ ಜಯಕುಮಾರ್‌ ಡಿ.ಆರ್ [ಬೆಂಗಳೂರು ವಿಭಾಗ]
9. ಚಿತ್ರದುರ್ಗ: ಶ್ರೀ ನಾಗರಾಜ ಜಿ [ಬೆಂಗಳೂರು ವಿಭಾಗ]
10. ಮೈಸೂರು: ಶ್ರೀ ಗೋಪಾಲ ಕೃಷ್ಣಾ [ಮೈಸೂರು ವಿಭಾಗ]
11. ಮಂಡ್ಯ: ಶ್ರೀ ಲವ. ಎನ್ [ಮೈಸೂರು ವಿಭಾಗ]
12. ಹಾಸನ: ಶ್ರೀ ಮಂಜುನಾಥ [ಮೈಸೂರು ವಿಭಾಗ]
13. ಚಾಮರಾಜನಗರ: ಶ್ರೀ ಸಿದ್ಧರಾಜು [ಮೈಸೂರು ವಿಭಾಗ]
14. ದಕ್ಷಿಣ ಕನ್ನಡ: ಶ್ರೀ ಮುತ್ತಪ್ಪ [ಮೈಸೂರು ವಿಭಾಗ]
15. ಉಡುಪಿ: ಶ್ರೀ ಗೀರಿಶ್ [ಮೈಸೂರು ವಿಭಾಗ]
16. ಚಿಕ್ಕಮಗಳೂರು: ಶ್ರೀ ವಿಶ್ವನಾಥಯ್ಯ [ಮೈಸೂರು ವಿಭಾಗ]
17. ಕೊಡಗು: ಶ್ರೀ ಪುಟ್ಟರಾಜು [ಮೈಸೂರು ವಿಭಾಗ]
18. ಬೆಳಗಾವಿ: ಶ್ರೀ ರವಿಕಾಂತ್ CM [ಬೆಳಗಾವಿ ವಿಭಾಗ]
19. ಧಾರವಾಡ: ಶ್ರೀ ಪರುಶುರಾಮ ಕವಲೂರು [ಬೆಳಗಾವಿ ವಿಭಾಗ]
20. ವಿಜಯಪುರ: ಶ್ರೀ ಬಸನಗೌಡ ಚೌದ್ರಿ [ಬೆಳಗಾವಿ ವಿಭಾಗ]
21. ಬಾಗಲಕೋಟೆ: ಶ್ರೀ ಸಿದ್ಧು ಬಿರದಾರ [ಬೆಳಗಾವಿ ವಿಭಾಗ]
22. ಗದಗ: ಶ್ರೀ ಸಂತೋಷ ಹೆಚ್‌ [ಬೆಳಗಾವಿ ವಿಭಾಗ]
23. ಹಾವೇರಿ: ಶ್ರೀ ಭೋಜರಾಜ [ಬೆಳಗಾವಿ ವಿಭಾಗ]
24. ಉತ್ತರ ಕನ್ನಡ: ಶ್ರೀ ಗೀರಿಶ್ [ಬೆಳಗಾವಿ ವಿಭಾಗ]
25. ಕಲಬುರ್ಗಿ: ಶ್ರೀ ರಾಜೇಶ್ವರಿ ಸಾಹು [ಕಲಬುರ್ಗಿ ವಿಭಾಗ]
26. ಬೀದರ್: ಶ್ರೀ ಚಂದ್ರಶೇಖರ ಬನ್ನಾಳೆ [ಕಲಬುರ್ಗಿ ವಿಭಾಗ]
27. ರಾಯಚೂರು: ಶ್ರೀ‌ ಸಿ.ಹೆಚ್ ಮುದಕಪ್ಪ [ಕಲಬುರ್ಗಿ ವಿಭಾಗ]
28. ಕೊಪ್ಪಳ: ಶ್ರೀ ವಿರೇಶ್.G.A [ಕಲಬುರ್ಗಿ ವಿಭಾಗ]
29. ಯಾದಗಿರಿ: ಶ್ರೀ ಮಲ್ಲಣ್ಣ ಮಾಳೂರು [ಕಲಬುರ್ಗಿ ವಿಭಾಗ]
31. ವಿಜಯನಗರ: ಶ್ರೀ ನವೀನಕುಮಾರ್ ಆರ್‌ ಡಿ [ಕಲಬುರ್ಗಿ ವಿಭಾಗ]

Search This Blog

16 April 2026

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಿಎಂ ಹೈಲೆವೆಲ್ ಮೀಟಿಂಗ್: ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ!

ಬೆಂಗಳೂರು: ರಾಜ್ಯದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಹಾಗೂ ಮುಂಬರುವ ಬೇಸಿಗೆಯ ಸವಾಲುಗಳನ್ನು ಎದುರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ಚರ್ಚಿಸಿದ ಸಿಎಂ, ನೀರಿನ ಅಭಾವ ನೀಗಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ನಿರ್ದೇಶನ ನೀಡಿದ್ದಾರೆ.
ಮುಂಗಾರು ಕೊರತೆಯ ಮುನ್ಸೂಚನೆ: ಎಚ್ಚರಿಕೆ ವಹಿಸಲು ಸೂಚನೆ
ಹವಾಮಾನ ಇಲಾಖೆಯ ವರದಿಯಂತೆ ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಇರಲಿದ್ದು, ಬಿಸಿ ಗಾಳಿಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸಭೆಯ ಪ್ರಮುಖ ನಿರ್ಧಾರಗಳು ಮತ್ತು ನಿರ್ದೇಶನಗಳು:
  • ಹಣಕಾಸು ಲಭ್ಯತೆ: ಕುಡಿಯುವ ನೀರು ಪೂರೈಕೆಗಾಗಿ ಜಿಲ್ಲಾಧಿಕಾರಿಗಳ ಪಿಡಿ (PD) ಖಾತೆಯಲ್ಲಿ ಒಟ್ಟು ₹419.50 ಕೋಟಿ ಹಣ ಲಭ್ಯವಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಆದೇಶಿಸಲಾಗಿದೆ.
  • ಪರ್ಯಾಯ ವ್ಯವಸ್ಥೆ:ನೀರಿನ ಮೂಲಗಳ ವೃದ್ಧಿಗಾಗಿ ಕೊಳವೆ ಬಾವಿಗಳ ಫ್ಲಶಿಂಗ್, ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯುವುದು ಹಾಗೂ ಅನಿವಾರ್ಯವಿದ್ದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಅನುಮತಿ ನೀಡಲಾಗಿದೆ.
  • ಟಾಸ್ಕ್ ಫೋರ್ಸ್ ಅನುಮೋದನೆ:ಯಾವುದೇ ಕಾಮಗಾರಿಗಳನ್ನು ಕೈಗೊಳ್ಳುವ ಮೊದಲು ಟಾಸ್ಕ್ ಫೋರ್ಸ್ ಮೂಲಕವೇ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು.
  • ಪಾರದರ್ಶಕತೆ: ನೀರಿನ ಸ್ಥಿತಿಗತಿ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಪ್ರತಿ 10 ದಿನಗಳಿಗೊಮ್ಮೆ  ಪತ್ರಿಕಾ ಪ್ರಕಟಣೆ ಹೊರಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
  • ಸಹಾಯವಾಣಿ ಮೇಲ್ವಿಚಾರಣೆ: ಸಹಾಯವಾಣಿಗಳ ಕುರಿತು ಬರುತ್ತಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ, ಜಿಲ್ಲಾ ಪಂಚಾಯತ್ ಸಿಇಒಗಳು ವೈಯಕ್ತಿಕವಾಗಿ ಇದರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಬೇಕೆಂದು ಸೂಚಿಸಿದ್ದಾರೆ.

ಗ್ರಾಮ ಪಂಚಾಯಿತಿಗಳ ದಾಖಲೆ ಮಟ್ಟದಲ್ಲಿ ತೆರಿಗೆ ಸಂಗ್ರಹ: ZP CEO ಅವರಿಗೆ ಅಭಿನಂದನೆ!

  • ಇದೇ ಸಂದರ್ಭದಲ್ಲಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ₹1,387 ಕೋಟಿ ದಾಖಲೆ ತೆರಿಗೆ ಸಂಗ್ರಹ ಮಾಡಿರುವ ಜಿಲ್ಲಾ ಪಂಚಾಯತ್ ಸಿಇಒಗಳ ಕಾರ್ಯವೈಖರಿಯನ್ನು ಮುಖ್ಯಮಂತ್ರಿಗಳು ಶ್ಲಾಘಿಸಿದರು. "ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತವಾಗದೆ ಜನಸ್ನೇಹಿಯಾಗಿ ಮತ್ತು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು" ಎಂದು ಅವರು ಕರೆ ನೀಡಿದರು.
  • ಮುಖ್ಯ ಅಂಶ:ರಾಜ್ಯದ ಯಾವುದೇ ಮೂಲೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದ್ದು, ಹಣದ ಕೊರತೆಯಿಲ್ಲ ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.
  • ವರದಿ ಸಂಗ್ರಹ: ಕರ್ನಾಟಕ ರಾಜ್ಯ PDO ಬಿ ಗ್ರೇಡ್‌ ಹುದ್ದೆ ಉನ್ನತೀಕರಣ ಸಂಘ(ರಿ)ಬೆಂಗಳೂರು

No comments:

Post a Comment