KSPDO B GRADE

ಸಂಘ / Association
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು
Karnataka State PDO B-Grade Upgradation Association (R), Bengaluru
ನೋಂದಣಿ ಸಂಖ್ಯೆ: DRB4/SOR/420/2023-24
Registration Number: DRB4/SOR/420/2023-24
ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ
Registered under Karnataka Co-operative Societies Act, 1960
ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ
State President: Sri Ramesh Nadageri
ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್
State Vice-President: Sri Jayagouda Patil
ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ
Women Vice-President: Smt. Sridevi Madiwalar

Live

MENU BAR

ಜಿಲ್ಲಾಧ್ಯಕ್ಷರು
1. ಬೆಂಗಳೂರು ನಗರ: ಶ್ರೀ ಧನಂಜಯ್ [ಬೆಂಗಳೂರು ವಿಭಾಗ]
2. ಬೆಂಗಳೂರು ಗ್ರಾಮಾಂತರ: ಶ್ರೀ ಸತೀಶ್ [ಬೆಂಗಳೂರು ವಿಭಾಗ]
3. ರಾಮನಗರ: ಶ್ರೀ ರವಿ.ಎನ್ [ಬೆಂಗಳೂರು ವಿಭಾಗ]
4. ಕೋಲಾರ: ಶ್ರೀ ಮೊಹನ್ ಕುಮಾರ್ [ಬೆಂಗಳೂರು ವಿಭಾಗ]
5. ಚಿಕ್ಕಬಳ್ಳಾಪೂರ: ಶ್ರೀ ಚಂದ್ರಶೇಖರ.G.W [ಬೆಂಗಳೂರು ವಿಭಾಗ]
6. ತುಮಕೂರು: ಶ್ರೀ ಜುಂಜೇಗೌಡ [ಬೆಂಗಳೂರು ವಿಭಾಗ]
7. ಶಿವಮೊಗ್ಗ: ಶ್ರೀ ಚಿದಾನಂದ [ಬೆಂಗಳೂರು ವಿಭಾಗ]
8. ದಾವಣಗೆರೆ: ಶ್ರೀ ಜಯಕುಮಾರ್‌ ಡಿ.ಆರ್ [ಬೆಂಗಳೂರು ವಿಭಾಗ]
9. ಚಿತ್ರದುರ್ಗ: ಶ್ರೀ ನಾಗರಾಜ ಜಿ [ಬೆಂಗಳೂರು ವಿಭಾಗ]
10. ಮೈಸೂರು: ಶ್ರೀ ಗೋಪಾಲ ಕೃಷ್ಣಾ [ಮೈಸೂರು ವಿಭಾಗ]
11. ಮಂಡ್ಯ: ಶ್ರೀ ಲವ. ಎನ್ [ಮೈಸೂರು ವಿಭಾಗ]
12. ಹಾಸನ: ಶ್ರೀ ಮಂಜುನಾಥ [ಮೈಸೂರು ವಿಭಾಗ]
13. ಚಾಮರಾಜನಗರ: ಶ್ರೀ ಸಿದ್ಧರಾಜು [ಮೈಸೂರು ವಿಭಾಗ]
14. ದಕ್ಷಿಣ ಕನ್ನಡ: ಶ್ರೀ ಮುತ್ತಪ್ಪ [ಮೈಸೂರು ವಿಭಾಗ]
15. ಉಡುಪಿ: ಶ್ರೀ ಗೀರಿಶ್ [ಮೈಸೂರು ವಿಭಾಗ]
16. ಚಿಕ್ಕಮಗಳೂರು: ಶ್ರೀ ವಿಶ್ವನಾಥಯ್ಯ [ಮೈಸೂರು ವಿಭಾಗ]
17. ಕೊಡಗು: ಶ್ರೀ ಪುಟ್ಟರಾಜು [ಮೈಸೂರು ವಿಭಾಗ]
18. ಬೆಳಗಾವಿ: ಶ್ರೀ ರವಿಕಾಂತ್ CM [ಬೆಳಗಾವಿ ವಿಭಾಗ]
19. ಧಾರವಾಡ: ಶ್ರೀ ಪರುಶುರಾಮ ಕವಲೂರು [ಬೆಳಗಾವಿ ವಿಭಾಗ]
20. ವಿಜಯಪುರ: ಶ್ರೀ ಬಸನಗೌಡ ಚೌದ್ರಿ [ಬೆಳಗಾವಿ ವಿಭಾಗ]
21. ಬಾಗಲಕೋಟೆ: ಶ್ರೀ ಸಿದ್ಧು ಬಿರದಾರ [ಬೆಳಗಾವಿ ವಿಭಾಗ]
22. ಗದಗ: ಶ್ರೀ ಸಂತೋಷ ಹೆಚ್‌ [ಬೆಳಗಾವಿ ವಿಭಾಗ]
23. ಹಾವೇರಿ: ಶ್ರೀ ಭೋಜರಾಜ [ಬೆಳಗಾವಿ ವಿಭಾಗ]
24. ಉತ್ತರ ಕನ್ನಡ: ಶ್ರೀ ಗೀರಿಶ್ [ಬೆಳಗಾವಿ ವಿಭಾಗ]
25. ಕಲಬುರ್ಗಿ: ಶ್ರೀ ರಾಜೇಶ್ವರಿ ಸಾಹು [ಕಲಬುರ್ಗಿ ವಿಭಾಗ]
26. ಬೀದರ್: ಶ್ರೀ ಚಂದ್ರಶೇಖರ ಬನ್ನಾಳೆ [ಕಲಬುರ್ಗಿ ವಿಭಾಗ]
27. ರಾಯಚೂರು: ಶ್ರೀ‌ ಸಿ.ಹೆಚ್ ಮುದಕಪ್ಪ [ಕಲಬುರ್ಗಿ ವಿಭಾಗ]
28. ಕೊಪ್ಪಳ: ಶ್ರೀ ವಿರೇಶ್.G.A [ಕಲಬುರ್ಗಿ ವಿಭಾಗ]
29. ಯಾದಗಿರಿ: ಶ್ರೀ ಮಲ್ಲಣ್ಣ ಮಾಳೂರು [ಕಲಬುರ್ಗಿ ವಿಭಾಗ]
31. ವಿಜಯನಗರ: ಶ್ರೀ ನವೀನಕುಮಾರ್ ಆರ್‌ ಡಿ [ಕಲಬುರ್ಗಿ ವಿಭಾಗ]

Search This Blog

13 April 2026

ಗ್ರಾಮ ಪಂಚಾಯಿತಿಯಲ್ಲಿ ವ್ಯಾಪ್ತಿಯಲ್ಲಿ ಆಸ್ತಿಗಳಿಗೆ ಲಭ್ಯವಿರುವ ತೆರಿಗೆ ವಿನಾಯಿತಿಗಳು

ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ವಿನಾಯಿತಿ ಮತ್ತು ನಿಯಮಗಳು

ಗ್ರಾಮ ಪಂಚಾಯತಿ ಆಸ್ತಿ ತೆರಿಗೆ ವಿನಾಯಿತಿ ಮತ್ತು ಪ್ರಮುಖ ನಿಯಮಗಳು

ಕರ್ನಾಟಕ ರಾಜ್ಯ PDO B ಗ್ರೇಡ್‌ ಹುದ್ದೆ ಉನ್ನತೀಕರಣ ಸಂಘ (ರಿ) ಬೆಂಗಳೂರು ಅವರ ಸಮಘ್ರಹಿಸಿ ಸರಳಿಕರಿಸಿದ ಮಾಹಿತಿ

1. ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಇರುವ ಆಸ್ತಿಗಳು (100% ರಿಯಾಯಿತಿ)

ಕೆಳಗಿನ ಆಸ್ತಿಗಳಿಗೆ ಗ್ರಾಮ ಪಂಚಾಯತಿ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ಇರುತ್ತದೆ:

  • ಸರ್ಕಾರದ ನಿಯಮದಡಿ ನಿರ್ಮಿಸಿದ ಕಟ್ಟಡಗಳು: ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 95(1)ರ ಅಡಿಯಲ್ಲಿ ನಿರ್ಮಿಸಲಾದ ಕಟ್ಟಡಗಳು.
  • ಪಂಚಾಯತಿ ಆಸ್ತಿಗಳು: ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿಗಳಿಗೆ ಸೇರಿದ ಕಟ್ಟಡಗಳು ಹಾಗೂ ಖಾಲಿ ನಿವೇಶನಗಳು.
  • ಧರ್ಮಾರ್ಥ ಮತ್ತು ಉಚಿತ ಸಂಸ್ಥೆಗಳು: ಇಂಡಿಯನ್ ಟ್ರಸ್ಟ್ ಆಕ್ಟ್ 1882 ಅಥವಾ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ 1997ರಡಿ ನೋಂದಾಯಿತವಾಗಿರುವ ಮತ್ತು ಆದಾಯ ತೆರಿಗೆ ವಿನಾಯಿತಿ (11 ಮತ್ತು 80ಜಿ) ಹೊಂದಿರುವ ಸಂಸ್ಥೆಗಳು ನಡೆಸುವ:
    • ಸಂಪೂರ್ಣ ಉಚಿತವಾಗಿ ನಡೆಸಲ್ಪಡುವ ಆಸ್ಪತ್ರೆಗಳು.
    • ವಿದ್ಯಾರ್ಥಿಗಳಿಂದಾಗಲಿ, ಪೋಷಕರಿಂದಾಗಲಿ ಯಾವುದೇ ಶುಲ್ಕ ಪಡೆಯದ ಉಚಿತ ಶಿಕ್ಷಣ ಸಂಸ್ಥೆಗಳು.
    • ಅನಾಥಾಶ್ರಮಗಳು, ವೃದ್ಧಾಶ್ರಮಗಳು, ವಿಶೇಷ ಚೇತನರ ನಿಲಯಗಳು/ಶಾಲೆಗಳು, ನಿರ್ಗತಿಕ ಮಹಿಳೆಯರ ಆಶ್ರಯ ತಾಣಗಳು ಮತ್ತು ಸರ್ಕಾರದ ಅಂಗೀಕೃತ ಜನೋಪಕಾರಿ ಸಂಸ್ಥೆಗಳು.
    ಗಮನಿಸಿ: ಈ ಧರ್ಮಾರ್ಥ ಸಂಸ್ಥೆಗಳು ಬಾಡಿಗೆಗೆ ನೀಡಿದ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಕಟ್ಟಡಗಳು ಹಾಗೂ ಖಾಲಿ ಜಾಗಗಳು ಕಡ್ಡಾಯವಾಗಿ ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ.
  • ಪೂಜಾ ಸ್ಥಳಗಳು: ಸಾರ್ವಜನಿಕ ಪೂಜಾ ಸ್ಥಳವಾಗಿ ಬಳಸಲ್ಪಡುತ್ತಿರುವ, ಯಾವುದೇ ಲಾಭಾಂಶವಿಲ್ಲದ ಧಾರ್ಮಿಕ ಸ್ಥಳಗಳು.
  • ಹಸಿರೀಕರಣ ಪ್ರದೇಶಗಳು: ಕೈಗಾರಿಕೆ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರಗಳ ವ್ಯಾಪ್ತಿಯ ಖಾಲಿ ಜಾಗಗಳಲ್ಲಿ ಬೆಳೆಸಿರುವ ನೆಡುತೋಪು/ಹಸಿರೀಕರಣ (ಲ್ಯಾಂಡ್‌ಸ್ಕೇಪ್) ಪ್ರದೇಶಗಳು.
  • ನವೀಕರಿಸಬಹುದಾದ ಇಂಧನ ಘಟಕದ ಭೂಮಿ:ನವೀಕರಿಸಬಹುದಾದ ಇಂಧನ ಘಟಕಕ್ಕಾಗಿ ಗುತ್ತಿಗೆಗೆ ಪಡೆದ, ಉಪಯೋಗಿಸದೆ ಇರುವ ಖಾಲಿ ಜಮೀನುಗಳು.
2.ಶೇಕಡಾವಾರು ತೆರಿಗೆ ವಿನಾಯಿತಿಗಳು (ರಿಯಾಯಿತಿಗಳು)

ವಿವಿಧ ವರ್ಗದ ಆಸ್ತಿ ಮಾಲೀಕರಿಗೆ ನಿಯಮಾನುಸಾರ ತೆರಿಗೆಯಲ್ಲಿ ರಿಯಾಯಿತಿ ಇರುತ್ತದೆ (ಯಾವುದೇ ಒಂದು ಸ್ವತ್ತಿಗೆ ಗರಿಷ್ಠ ಒಂದು ವಿನಾಯಿತಿ ಮಾತ್ರ ಅನ್ವಯಿಸುತ್ತದೆ):

  • ಶೇ. 50% ವಿನಾಯಿತಿ ವಾಸದ ಮನೆಗಳಿಗೆ: ಸೈನಿಕರು, ಮಾಜಿ ಸೈನಿಕರು, ಸೈನಿಕರ ವಿಧವೆಯರು, ವಿಶೇಷ ಚೇತನರು, ವಿಧವೆಯರು, ಹೆಚ್.ಐ.ವಿ (ಏಡ್ಸ್) ಮತ್ತು ಕುಷ್ಠರೋಗ ಪೀಡಿತ ಮಾಲೀಕರ ಸ್ವಂತ ವಾಸದ ಮನೆಗಳಿಗೆ.
  • ಶೇ. 50% ವಿನಾಯಿತಿ ಉದ್ಯಮಗಳಿಗೆ: ಸರ್ಕಾರದ ಯೋಜನೆಗಳಡಿ ನೋಂದಾಯಿತ ಮಹಿಳಾ ಸ್ವ-ಸಹಾಯ ಸಂಘಗಳು/ಒಕ್ಕೂಟಗಳು ಮತ್ತು ವಿಶೇಷ ಚೇತನರು ನಡೆಸುವ ಸಣ್ಣ ವಾಣಿಜ್ಯ/ಉದ್ಯಮ ಘಟಕಗಳಿಗೆ.
  • ಶೇ. 30% ವಿನಾಯಿತಿ APMC ಪ್ರಾಂಗಣ: ಸ್ವಯಂ ನಿರ್ವಹಣೆಯ ನಾಗರಿಕ ಸೌಲಭ್ಯಗಳಾದ ನೀರು, ತ್ಯಾಜ್ಯ (ಘನ/ದ್ರವ) ನಿರ್ವಹಣೆ ಹೊಂದಿರುವ APMC ಪ್ರಾಂಗಣದ ಆಸ್ತಿಗಳಿಗೆ.
  • ಶೇ. 25% ಸೇವಾ ಶುಲ್ಕ ಸರ್ಕಾರಿ ಕಟ್ಟಡಗಳು: ಕೇಂದ್ರ/ರಾಜ್ಯ ಸರ್ಕಾರಕ್ಕೆ ಸೇರಿದ ಕಟ್ಟಡಗಳು ಅಥವಾ ಖಾಲಿ ನಿವೇಶನಗಳಿಗೆ (ಪ್ರಾಥಮಿಕ/ಪ್ರೌಢಶಾಲೆ, ಅಂಗನವಾಡಿ ಹೊರತುಪಡಿಸಿ) ಒಟ್ಟು ತೆರಿಗೆಯ ಶೇ. 25 ರಷ್ಟು ಮಾತ್ರ ಸೇವಾ ಶುಲ್ಕ ವಿಧಿಸಲಾಗುತ್ತದೆ.
  • ಶೇ. 15% ವಿನಾಯಿತಿ ವಸತಿ ಸಮುಚ್ಚಯಗಳು: ನೀರು, ಕಸದ ನಿರ್ವಹಣೆ, ಸೋಲಾರ್ ಬೀದಿ ದೀಪ ವ್ಯವಸ್ಥೆಯನ್ನು ಸ್ವತಃ ಹೊಂದಿರುವ ಅಪಾರ್ಟ್‌ಮೆಂಟ್, ಗೇಟೆಡ್ ಕಮ್ಯುನಿಟಿ, ವಿಲ್ಲಾ ಮುಂತಾದ ಬಹು ಮಾಲೀಕತ್ವದ ಆಸ್ತಿಗಳಿಗೆ.
  • ಶೇ. 5% ವಿನಾಯಿತಿ ಮುಂಗಡ ಪಾವತಿ: ಆರ್ಥಿಕ ವರ್ಷ ಪ್ರಾರಂಭವಾದ 3 ತಿಂಗಳ ಒಳಗಾಗಿ ಆ ವರ್ಷದ ಸಂಪೂರ್ಣ ತೆರಿಗೆ ಪಾವತಿಸುವವರಿಗೆ.
3. ವಿಶೇಷ ತೆರಿಗೆ ನಿಯಮಗಳು (ಗೃಹ ಕೈಗಾರಿಕೆ ಮತ್ತು ಹೋಮ್-ಸ್ಟೇ)
  • ಗೃಹ ಕೈಗಾರಿಕೆಗಳು: ವಾಸದ ಮನೆಯಲ್ಲಿ ನಡೆಸುವ ಕೈಮಗ್ಗ, ಗುಡಿ ಕೈಗಾರಿಕೆ, ಕೃಷಿ ಆಧಾರಿತ ಚಟುವಟಿಕೆಗಳಿಗೆ ವಾಣಿಜ್ಯ ದರದ ಬದಲು ವಸತಿ ಕಟ್ಟಡದ ದರದಲ್ಲೇ ತೆರಿಗೆ ಇರುತ್ತದೆ.
  • ಹೋಮ್-ಸ್ಟೇ (Home-Stay): ಪ್ರವಾಸೋದ್ಯಮ ಇಲಾಖೆಯ ನೀತಿಯ ಅವಧಿಯಲ್ಲಿ ಹೋಮ್-ಸ್ಟೇಗಳಿಗೆ ವಸತಿ ದರದಲ್ಲೇ ತೆರಿಗೆ ಇರುತ್ತದೆ. ಆದರೆ, ಮಾಲೀಕರು ಅಲ್ಲಿ ವಾಸವಿರದೆ ಏಜೆಂಟರ ಮೂಲಕ ನಡೆಸುತ್ತಿದ್ದರೆ ಅದನ್ನು 'Bed and Breakfast' ಎಂದು ಪರಿಗಣಿಸಿ ವಾಣಿಜ್ಯ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ.
4. ತೆರಿಗೆ ಆಕ್ಷೇಪಣೆ ಮತ್ತು ಮೇಲ್ಮನವಿ ಸಲ್ಲಿಸುವ ವಿಧಾನ

ವಿಧಿಸಲಾದ ತೆರಿಗೆ ಅಥವಾ ಶುಲ್ಕದ ಬಗ್ಗೆ ತಕರಾರಿದ್ದರೆ ಈ ಕೆಳಗಿನ ಕ್ರಮ ಅನುಸರಿಸಬೇಕು:

1
ಠೇವಣಿ: ಮೊದಲು ನಿಗದಿಪಡಿಸಿದ ತೆರಿಗೆ/ಫೀಜಿನ ಶೇ. 50 ರಷ್ಟು ಮೊತ್ತವನ್ನು ಗ್ರಾಮ ಪಂಚಾಯತಿಗೆ ಕಡ್ಡಾಯವಾಗಿ ಠೇವಣಿ ಇಡಬೇಕು.
2
ತಾಲ್ಲೂಕು ಮಟ್ಟ: ನಂತರ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗೆ (EO) ಮೇಲ್ಮನವಿ ಸಲ್ಲಿಸಬೇಕು. ಇವರು 30 ದಿನಗಳೊಳಗೆ ವಿಚಾರಣೆ ನಡೆಸಿ ಆದೇಶ ನೀಡುತ್ತಾರೆ.
3
ಜಿಲ್ಲಾ ಮಟ್ಟ: ಈ ಆದೇಶಕ್ಕೆ ತೃಪ್ತಿ ಇಲ್ಲದಿದ್ದರೆ, 30 ದಿನಗಳೊಳಗೆ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ (CEO) ಮೇಲ್ಮನವಿ ಸಲ್ಲಿಸಬಹುದು. ಇವರ ತೀರ್ಮಾನವೇ ಅಂತಿಮ.
5. ಆಸ್ತಿ ವಿವರಗಳ ವಹಿಯಲ್ಲಿ ಬದಲಾವಣೆ (ಮ್ಯುಟೇಷನ್ / ಖಾತೆ ಬದಲಾವಣೆ)

ಗ್ರಾಮ ಪಂಚಾಯತಿಯ ಆಸ್ತಿ ದಾಖಲೆಗಳಲ್ಲಿ ಕೆಳಗಿನ ಸಂದರ್ಭಗಳಲ್ಲಿ ಬದಲಾವಣೆ ಮಾಡಲು ಅವಕಾಶವಿದೆ:

  • ಆಸ್ತಿ ವಿಭಜನೆ, ಕ್ರಯಪತ್ರ (Sale Deed), ದಾನಪತ್ರ (Gift Deed), ವಿಲ್, ರಿಲೀಸ್ ಡೀಡ್, ಕೋರ್ಟ್ ಆದೇಶ ಅಥವಾ ಬ್ಯಾಂಕ್ ಹರಾಜಿನ ಮೂಲಕ ಮಾಲೀಕತ್ವ, ಅಳತೆ ಬದಲಾದಾಗ.
  • ಆಸ್ತಿ ವಹಿಯಲ್ಲಿ ವಿವರಗಳು ತಪ್ಪಾಗಿ ದಾಖಲಾಗಿದ್ದು ತಿದ್ದುಪಡಿ ಅಥವಾ ರದ್ದು ಮಾಡಬೇಕಾದಾಗ.
  • ಹೊಸದಾಗಿ ಕಟ್ಟಡ ನಿರ್ಮಿಸಿದಾಗ, ಪುನರ್ ನಿರ್ಮಿಸಿದಾಗ ಅಥವಾ ವಿಸ್ತರಿಸಿದಾಗ.
  • ಮೃತರಾದ ಮಾಲೀಕರ ಕಾನೂನುಬದ್ಧ ವಾರಸುದಾರರ ಹೆಸರನ್ನು ಸೇರಿಸಬೇಕಾದಾಗ.
ಬದಲಾವಣೆಯ ವಿಧಾನ: ನೋಂದಾಯಿತ ಪತ್ರಗಳ ಬದಲಾವಣೆ ಹೊರತುಪಡಿಸಿ ಉಳಿದವುಗಳಿಗೆ ಪಂಚಾಯತಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಬಂದ ನಂತರ ಸಾರ್ವಜನಿಕ ಆಕ್ಷೇಪಣೆಗಾಗಿ ಪಂಚಾಯತಿ ನೋಟಿಸ್ ಬೋರ್ಡ್‌ನಲ್ಲಿ 7 ದಿನಗಳ ನೋಟಿಸ್ ಪ್ರಕಟಿಸಲಾಗುತ್ತದೆ.

No comments:

Post a Comment