ಕರ್ನಾಟಕ ಸರ್ಕಾರ: ಗ್ರಾಮ ಪಂಚಾಯತ್ PDO / ಉಪ ತಾಲ್ಲೂಕು ಮಟ್ಟದ ಪರಿಷ್ಕೃತ ವಿತ್ತಾಧಿಕಾರ ಪ್ರತ್ಯಾಯೋಜನೆ (DOP 2024)
ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆಯು ಗ್ರಾಮ ಪಂಚಾಯತ್ ಪಿಡಿಒ ಹಾಗೂ ಉಪ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಅನ್ವಯವಾಗುವಂತೆ ಪರಿಷ್ಕೃತ ವಿತ್ತಾಧಿಕಾರ ಪ್ರತ್ಯಾಯೋಜನೆ (DOP 2024) ಆದೇಶವನ್ನು ಹೊರಡಿಸಿದೆ.
1. ಉಪ ತಾಲ್ಲೂಕು / PDO ಮಟ್ಟಕ್ಕೆ ಅನ್ವಯವಾಗುವ ಸಾಮಾನ್ಯ ಆರ್ಥಿಕ ಮಿತಿಗಳು
| ಕ್ರ.ಸಂ. | ಅಧಿಕಾರದ ವಿವರ / ಬಾಬ್ತು | ಸಂಹಿತೆ / ನಿಯಮ ಉಲ್ಲೇಖ | ಪರಿಷ್ಕೃತ ಆರ್ಥಿಕ ಮಿತಿ |
|---|---|---|---|
| 1 | ಪುಸ್ತಕಗಳು ಮತ್ತು ನಿಯತಕಾಲಿಕೆಗಳು | Rule 55(9) & 45 of MCE | ವಾರ್ಷಿಕ ₹1,000/- |
| 2 | ಲೇಖನ ಸಾಮಗ್ರಿಗಳ ಖರೀದಿ (Stationery) | Rule 55(48) of MCE | ಪ್ರತಿ ಬಾರಿಗೆ ₹4,000/- (ವಾರ್ಷಿಕ ₹40,000/-) |
| 3 | ಕಚೇರಿ ಉಪಕರಣಗಳು & ರಿಪೇರಿ (ಜೆರಾಕ್ಸ್/ಸ್ಕಾನರ್) | Rule 55(49) of MCE | ವಾರ್ಷಿಕ ಗರಿಷ್ಠ ₹50,000/- |
| 4 | ಕಂಪ್ಯೂಟರ್ ಮತ್ತು ಸಂಬಂಧಿತ ಉಪಕರಣಗಳು | E-Governance Guidelines | ವಾರ್ಷಿಕ ಗರಿಷ್ಠ ₹50,000/- |
| 5 | ಕಚೇರಿ ಪೀಠೋಪಕರಣ ಖರೀದಿ (Furniture) | Rule 55(28) of MCE | ವಾರ್ಷಿಕ ಗರಿಷ್ಠ ₹50,000/- |
| 6 | ಕಂಪ್ಯೂಟರ್ ರಿಪೇರಿ ಮತ್ತು AMC | Sl. No. 13 of Annexure | ವಾರ್ಷಿಕ ಗರಿಷ್ಠ ₹1.00 ಲಕ್ಷ |
| 7 | ಕಚೇರಿ ಉಪಕರಣ & ಪೀಠೋಪಕರಣ ರಿಪೇರಿ/AMC | Sl. No. 14 of Annexure | ವಾರ್ಷಿಕ ಗರಿಷ್ಠ ₹1.00 ಲಕ್ಷ |
| 8 | ವಾಹನ ರಿಪೇರಿ ವೆಚ್ಚ (ಅಧಿಕೃತ ವಾಹನಕ್ಕೆ) | Rule 55(40)(A) of MCE | ಪ್ರತಿ ವಾಹನಕ್ಕೆ ₹20,000/- (ವಾರ್ಷಿಕ ₹1.00 ಲಕ್ಷ) |
| 9 | ತರಬೇತಿ ಕಾರ್ಯಕ್ರಮಗಳ ವೆಚ್ಚ | Sl. No. 21 of Annexure | ಪ್ರತಿ ಬಾರಿಗೆ ₹4,000/- (ವಾರ್ಷಿಕ ₹40,000/-) |
| 10 | ಅನುಪಯುಕ್ತ ವಸ್ತುಗಳ ವಿಲೇವಾರಿ (Disposal) | Article 168 of KFC | ಪ್ರಕರಣಕ್ಕೆ ₹20,000/- (ವಾರ್ಷಿಕ ₹1.00 ಲಕ್ಷ) |
2. ಸಿಬ್ಬಂದಿ ಸೇವಾ ಮತ್ತು ಆಡಳಿತಾತ್ಮಕ ಅಧಿಕಾರಗಳು
- ಪ್ರಸೂತಿ ರಜೆ (Rule 135 KCSRs): ಗೆಜೆಟೆಡ್ ಮತ್ತು ನಾನ್-ಗೆಜೆಟೆಡ್ ಮಹಿಳಾ ಸಿಬ್ಬಂದಿಗೆ ಮಂಜೂರು ಮಾಡಲು ಸಂಪೂರ್ಣ ಅಧಿಕಾರ.
- ಗಳಿಕೆ ರಜೆ ನಗದೀಕರಣ (Rule 118 & 118A KCSRs): ವಾರ್ಷಿಕ ರಜೆ ನಗದೀಕರಣ ಮತ್ತು ನಿವೃತ್ತಿ/ಮರಣ ಸಂದರ್ಭದಲ್ಲಿ ನಗದೀಕರಣಕ್ಕೆ ಸಂಪೂರ್ಣ ಅಧಿಕಾರ.
- ಪ್ರಭಾರ ವ್ಯವಸ್ಥೆ (Rule 32 & 68 KCSRs): ಗ್ರೂಪ್ 'C' ಮತ್ತು ಗ್ರೂಪ್ 'D' ಸಿಬ್ಬಂದಿಗೆ ಸಂಬಂಧಿಸಿದಂತೆ ಸಂಪೂರ್ಣ ಅಧಿಕಾರ.
- ಮುಂಗಡಗಳು (Advances): ಪ್ರವಾಸ ಭತ್ಯೆ, ಮನೆ ನಿರ್ಮಾಣ (HBA) ಮತ್ತು ವಾಹನ ಮುಂಗಡ ಮಂಜೂರಾತಿಗೆ ಸರ್ಕಾರದ ನಿಯಮಾನುಸಾರ ಅಧಿಕಾರ.
3. ಕಡ್ಡಾಯ ಷರತ್ತುಗಳು ಮತ್ತು ಮಾರ್ಗಸೂಚಿಗಳು (Conditions)
- ವಿಶೇಷ vs ಸಾಮಾನ್ಯ ಅಧಿಕಾರ (ಕಂಡಿಕೆ 3): ಪಂಚಾಯತ್ ರಾಜ್ ಅಧಿನಿಯಮ (KPR Act) ಅಥವಾ ಪಂಚಾಯಿತಿ ನಿಧಿಗಳಿಗೆ ಪ್ರತ್ಯೇಕ 'ವಿಶೇಷ ಆರ್ಥಿಕ ಅಧಿಕಾರ' ನೀಡಿದ್ದರೆ, ಆ ವಿಶೇಷ ಅಧಿಕಾರ ಮಾತ್ರ ಅನ್ವಯಿಸುತ್ತದೆ. ಎರಡನ್ನೂ ಏಕಕಾಲದಲ್ಲಿ ಬಳಸುವಂತಿಲ್ಲ.
- KTPP ಕಾಯ್ದೆ ಪಾಲನೆ: ಯಾವುದೇ ಖರೀದಿ ಅಥವಾ ಕಾಮಗಾರಿಯಲ್ಲಿ ಪಾರದರ್ಶಕತೆ ಕಾಯ್ದೆ (KTPP Act & Rules) ಕಡ್ಡಾಯವಾಗಿ ಪಾಲಿಸತಕ್ಕದ್ದು.
- ಬಜೆಟ್ ಅನುದಾನದ ಮಿತಿ: ಎಲ್ಲಾ ವೆಚ್ಚಗಳು ಮಂಜೂರಾದ ಬಜೆಟ್ ಅನುದಾನದ ಮಿತಿಯೊಳಗೆ ಮಾತ್ರ ಇರಬೇಕು.
- ಪುನರ್ ಪ್ರತ್ಯಾಯೋಜನೆ ನಿಷೇಧ: ಈ ಆರ್ಥಿಕ ಅಧಿಕಾರವನ್ನು ಇತರರಿಗೆ ಪುನರ್ ಪ್ರತ್ಯಾಯೋಜನೆ (Sub-delegate) ಮಾಡುವಂತಿಲ್ಲ.
No comments:
Post a Comment