ಕರ್ನಾಟಕ ರಾಜ್ಯದಲ್ಲಿ ಸ್ಥಳೀಯ ಯೋಜನಾ ಪ್ರದೇಶಗಳನ್ನು ಹೊರತುಪಡಿಸಿ ಇತರೆ ಪ್ರದೇಶಗಳಲ್ಲಿ ಕಟ್ಟಡಗಳ ಅಭಿವೃದ್ಧಿ ಹಾಗೂ ನಕ್ಷೆ ಅನುಮೋದನೆಗೆ ಸಂಬಂಧಿಸಿದಂತೆ ತಾಂತ್ರಿಕ ಅನುಮೋದನೆ ನೀಡುವ ಅಧಿಕಾರವನ್ನು ವಿವಿಧ ಹಂತದ ಅಧಿಕಾರಿಗಳಿಗೆ ಪ್ರತ್ಯಾಯೋಜಿಸಿ ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯವು ಅಧಿಕೃತ ಸುತ್ತೋಲೆ ಹೊರಡಿಸಿದೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ತಿದ್ದುಪಡಿ) ಕಾಯ್ದೆ, 2021ರ ಕಲಂ 4-ಕೆ ಅನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ಸ್ಥಳೀಯ ಯೋಜನಾ ಪ್ರದೇಶಗಳ ಹೊರಗಿನ ಪ್ರದೇಶಗಳಲ್ಲಿ ಬರುವ ವಸತಿ, ವಾಣಿಜ್ಯ, ಶೈಕ್ಷಣಿಕ ಹಾಗೂ ಕೈಗಾರಿಕಾ ಉದ್ದೇಶಗಳ ಕಟ್ಟಡ ನಿರ್ಮಾಣ ಪ್ರಸ್ತಾವನೆಗಳ ವಿಲೇವಾರಿಗೆ ಸ್ಪಷ್ಟ ಅಧಿಕಾರ ಮಿತಿಗಳನ್ನು ನಿಗದಿಪಡಿಸಲಾಗಿದೆ.
- ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ (ತಿದ್ದುಪಡಿ) ಕಾಯ್ದೆ, 2021ರ ಕಲಂ 4-ಕೆ(4) ರನ್ವಯ ಅಧಿಕಾರ ಪ್ರತ್ಯಾಯೋಜನೆ.
- ನಿಯಮ 26ರನ್ವಯ ನಿಗದಿಪಡಿಸಿದ ಪರಿಶೀಲನಾ ಶುಲ್ಕವನ್ನು ಸಂಬಂಧಿತ ಲೆಕ್ಕ ಶೀರ್ಷಿಕೆಗೆ ಪಾವತಿಸುವುದು ಕಡ್ಡಾಯ.
- ಕಟ್ಟಡಗಳ ಬದಲಾವಣೆ (Alteration/modification) ಪ್ರಸ್ತಾವನೆಗಳಿಗೂ ಇದು ಅನ್ವಯಿಸುತ್ತದೆ.
ಅಧಿಕಾರ ವ್ಯಾಪ್ತಿ ಮತ್ತು ಮಿತಿಗಳ ಕೋಷ್ಟಕ
| ಉದ್ದೇಶ | ನಿರ್ಮಿಸಲು ಉದ್ದೇಶಿಸಿರುವ ವಿಸ್ತೀರ್ಣ (Built up Area) & ಮಹಡಿಗಳು | ಅಧಿಕಾರ ವ್ಯಾಪ್ತಿ / ಅಧಿಕಾರಿಗಳು |
|---|---|---|
| ವಸತಿ / ವಾಣಿಜ್ಯ / ಶೈಕ್ಷಣಿಕ / ಕೈಗಾರಿಕೆ / ಗ್ರೂಪ್ ಹೌಸಿಂಗ್ | 4000 ಚ.ಮೀ ವರೆಗೆ (ಎತ್ತರ: Upto 12 Mtrs) | ಸಹಾಯಕ ನಿರ್ದೇಶಕರು, ಸಹಾಯಕ ನಿರ್ದೇಶಕರ ಕಛೇರಿ |
| 4000 ರಿಂದ 10000 ಚ.ಮೀ ವರೆಗೆ (ಎತ್ತರ: Upto 21 Mtrs) ಹಾಗೂ 12 ಮೀಟರ್‌ಗಿಂತ ಮೇಲ್ಪಟ್ಟ ಎತ್ತರ | ಅಪರ ನಿರ್ದೇಶಕರು / ಜಂಟಿ ನಿರ್ದೇಶಕರು, ವಲಯ / ವಿಭಾಗೀಯ ಕಛೇರಿ | |
| 10,000 ಚ.ಮೀ ಮೇಲ್ಪಟ್ಟು ಮತ್ತು ಉಳಿದ ಎಲ್ಲಾ ಪ್ರಮುಖ ಪ್ರಕರಣಗಳು | ಕೇಂದ್ರ ಕಛೇರಿ |
ಅಧಿಕಾರ ಮಿತಿಯನ್ನು ಮೀರಿದ ಪ್ರಸ್ತಾವನೆಗಳನ್ನು ಯಾವುದೇ ವಿಳಂಬವಿಲ್ಲದೆ ಮೇಲಾಧಿಕಾರಿಗಳಿಗೆ ಸಲ್ಲಿಸಿ ಅಗತ್ಯ ಅನುಮೋದನೆ ಪಡೆದುಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ದಾಖಲೆಯನ್ನು ಡೌನ್‌ಲೋಡ್ ಮಾಡಿ:
ಸುತ್ತೋಲೆ PDF ಡೌನ್‌ಲೋಡ್ ಮಾಡಿ
No comments:
Post a Comment