KSPDO B GRADE

ಸಂಘ / Association
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು
Karnataka State PDO B-Grade Upgradation Association (R), Bengaluru
ನೋಂದಣಿ ಸಂಖ್ಯೆ: DRB4/SOR/420/2023-24
Registration Number: DRB4/SOR/420/2023-24
ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ
Registered under Karnataka Co-operative Societies Act, 1960
ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ
State President: Sri Ramesh Nadageri
ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್
State Vice-President: Sri Jayagouda Patil
ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ
Women Vice-President: Smt. Sridevi Madiwalar

Live

MENU BAR

ಜಿಲ್ಲಾಧ್ಯಕ್ಷರು
1. ಬೆಂಗಳೂರು ನಗರ: ಶ್ರೀ ಧನಂಜಯ್ [ಬೆಂಗಳೂರು ವಿಭಾಗ]
2. ಬೆಂಗಳೂರು ಗ್ರಾಮಾಂತರ: ಶ್ರೀ ಸತೀಶ್ [ಬೆಂಗಳೂರು ವಿಭಾಗ]
3. ರಾಮನಗರ: ಶ್ರೀ ರವಿ.ಎನ್ [ಬೆಂಗಳೂರು ವಿಭಾಗ]
4. ಕೋಲಾರ: ಶ್ರೀ ಮೊಹನ್ ಕುಮಾರ್ [ಬೆಂಗಳೂರು ವಿಭಾಗ]
5. ಚಿಕ್ಕಬಳ್ಳಾಪೂರ: ಶ್ರೀ ಚಂದ್ರಶೇಖರ.G.W [ಬೆಂಗಳೂರು ವಿಭಾಗ]
6. ತುಮಕೂರು: ಶ್ರೀ ಜುಂಜೇಗೌಡ [ಬೆಂಗಳೂರು ವಿಭಾಗ]
7. ಶಿವಮೊಗ್ಗ: ಶ್ರೀ ಚಿದಾನಂದ [ಬೆಂಗಳೂರು ವಿಭಾಗ]
8. ದಾವಣಗೆರೆ: ಶ್ರೀ ಜಯಕುಮಾರ್‌ ಡಿ.ಆರ್ [ಬೆಂಗಳೂರು ವಿಭಾಗ]
9. ಚಿತ್ರದುರ್ಗ: ಶ್ರೀ ನಾಗರಾಜ ಜಿ [ಬೆಂಗಳೂರು ವಿಭಾಗ]
10. ಮೈಸೂರು: ಶ್ರೀ ಗೋಪಾಲ ಕೃಷ್ಣಾ [ಮೈಸೂರು ವಿಭಾಗ]
11. ಮಂಡ್ಯ: ಶ್ರೀ ಲವ. ಎನ್ [ಮೈಸೂರು ವಿಭಾಗ]
12. ಹಾಸನ: ಶ್ರೀ ಮಂಜುನಾಥ [ಮೈಸೂರು ವಿಭಾಗ]
13. ಚಾಮರಾಜನಗರ: ಶ್ರೀ ಸಿದ್ಧರಾಜು [ಮೈಸೂರು ವಿಭಾಗ]
14. ದಕ್ಷಿಣ ಕನ್ನಡ: ಶ್ರೀ ಮುತ್ತಪ್ಪ [ಮೈಸೂರು ವಿಭಾಗ]
15. ಉಡುಪಿ: ಶ್ರೀ ಗೀರಿಶ್ [ಮೈಸೂರು ವಿಭಾಗ]
16. ಚಿಕ್ಕಮಗಳೂರು: ಶ್ರೀ ವಿಶ್ವನಾಥಯ್ಯ [ಮೈಸೂರು ವಿಭಾಗ]
17. ಕೊಡಗು: ಶ್ರೀ ಪುಟ್ಟರಾಜು [ಮೈಸೂರು ವಿಭಾಗ]
18. ಬೆಳಗಾವಿ: ಶ್ರೀ ರವಿಕಾಂತ್ CM [ಬೆಳಗಾವಿ ವಿಭಾಗ]
19. ಧಾರವಾಡ: ಶ್ರೀ ಪರುಶುರಾಮ ಕವಲೂರು [ಬೆಳಗಾವಿ ವಿಭಾಗ]
20. ವಿಜಯಪುರ: ಶ್ರೀ ಬಸನಗೌಡ ಚೌದ್ರಿ [ಬೆಳಗಾವಿ ವಿಭಾಗ]
21. ಬಾಗಲಕೋಟೆ: ಶ್ರೀ ಸಿದ್ಧು ಬಿರದಾರ [ಬೆಳಗಾವಿ ವಿಭಾಗ]
22. ಗದಗ: ಶ್ರೀ ಸಂತೋಷ ಹೆಚ್‌ [ಬೆಳಗಾವಿ ವಿಭಾಗ]
23. ಹಾವೇರಿ: ಶ್ರೀ ಭೋಜರಾಜ [ಬೆಳಗಾವಿ ವಿಭಾಗ]
24. ಉತ್ತರ ಕನ್ನಡ: ಶ್ರೀ ಗೀರಿಶ್ [ಬೆಳಗಾವಿ ವಿಭಾಗ]
25. ಕಲಬುರ್ಗಿ: ಶ್ರೀ ರಾಜೇಶ್ವರಿ ಸಾಹು [ಕಲಬುರ್ಗಿ ವಿಭಾಗ]
26. ಬೀದರ್: ಶ್ರೀ ಚಂದ್ರಶೇಖರ ಬನ್ನಾಳೆ [ಕಲಬುರ್ಗಿ ವಿಭಾಗ]
27. ರಾಯಚೂರು: ಶ್ರೀ‌ ಸಿ.ಹೆಚ್ ಮುದಕಪ್ಪ [ಕಲಬುರ್ಗಿ ವಿಭಾಗ]
28. ಕೊಪ್ಪಳ: ಶ್ರೀ ವಿರೇಶ್.G.A [ಕಲಬುರ್ಗಿ ವಿಭಾಗ]
29. ಯಾದಗಿರಿ: ಶ್ರೀ ಮಲ್ಲಣ್ಣ ಮಾಳೂರು [ಕಲಬುರ್ಗಿ ವಿಭಾಗ]
31. ವಿಜಯನಗರ: ಶ್ರೀ ನವೀನಕುಮಾರ್ ಆರ್‌ ಡಿ [ಕಲಬುರ್ಗಿ ವಿಭಾಗ]

Search This Blog

14 August 2026

ಇ-ಸ್ವತ್ತು 2.0 & ತೆರಿಗೆ ಪಟ್ಟಿಯಿಂದ ಆಸ್ತಿಗಳ ರದ್ದತಿ (Invalidation)

ಇ-ಸ್ವತ್ತು 2.0 & ತೆರಿಗೆ ಪಟ್ಟಿಯಿಂದ ಆಸ್ತಿಗಳ ರದ್ದತಿ (Invalidation)

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಉಪಯುಕ್ತ ಪ್ರಶ್ನೋತ್ತರಗಳು (FAQ)

ಕರ್ನಾಟಕ ರಾಜ್ಯ PDO ಬಿ ಗ್ರೇಡ್‌ ಹುದ್ದೆ ಉನ್ನತೀಕರಣ ಸಂಘ (ರಿ) ಬೆಂಗಳೂರು

ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಸುತ್ತೋಲೆ ಸಂ: ಕಪಂರಾಆ/ಅಭಿವೃದ್ಧಿ/763/2026

ಉದ್ದೇಶ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು 2025ರ ಅನ್ವಯ ಸರ್ಕಾರಿ, ಅರಣ್ಯ, ಸ್ಥಳೀಯ ನಿಕಾಯಗಳ ಭೂಮಿ ಹಾಗೂ ನಕಲಿ/ಸಂಶಯಾಸ್ಪದ ಆಸ್ತಿಗಳನ್ನು ಇ-ಸ್ವತ್ತು 2.0 ಮತ್ತು ಕರ ನಿರ್ಧರಣಾ ವಹಿಯಿಂದ ರದ್ದುಪಡಿಸುವ/ಕೈಬಿಡುವ (Invalidate) ಸಂಪೂರ್ಣ ಪ್ರಕ್ರಿಯೆಯ ಸರಳ ಮಾಹಿತಿ.
ಪ್ರಶ್ನೆ 1 ಈ ಸುತ್ತೋಲೆಯ ಮುಖ್ಯ ಉದ್ದೇಶವೇನು?
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ 2025 ರ ಪ್ರಕರಣ 199(C) ಹಾಗೂ ನಿಯಮಗಳು 2025 ರ ನಿಯಮ 7(1) & 8(2-ಈ) ರ ಪ್ರಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಂದ್ರ/ರಾಜ್ಯ ಸರ್ಕಾರ, ಅರಣ್ಯ ಮತ್ತು ಸ್ಥಳೀಯ ಸಂಸ್ಥೆಗಳ ಜಾಗಗಳಲ್ಲಿ ನಿಯಮಬಾಹಿರವಾಗಿ ನಿರ್ಮಿಸಲಾದ ಕಟ್ಟಡ/ನಿವೇಶನಗಳಿಗೆ ತೆರಿಗೆ ವಿಧಿಸುವುದನ್ನು ತಡೆಯುವುದು ಹಾಗೂ ಈಗಾಗಲೇ ತೆರಿಗೆಗೆ ಒಳಪಟ್ಟಿರುವ ಆಸ್ತಿಗಳನ್ನು ಇ-ಸ್ವತ್ತು 2.0 ಮತ್ತು ಕರ ವಹಿಯಿಂದ ಕೈಬಿಡುವುದು (Invalidate ಮಾಡುವುದು).
ಪ್ರಶ್ನೆ 2 ಯಾವೆಲ್ಲಾ ಆಸ್ತಿಗಳನ್ನು ಗುರುತಿಸಿ ರದ್ದುಪಡಿಸಲು ಪಟ್ಟಿ ಮಾಡಬೇಕು?
ಗ್ರಾಮ ಪಂಚಾಯಿತಿಯ ಕರ ನಿರ್ಧರಣಾ ವಹಿಯಲ್ಲಿರುವ (ನಮೂನೆ 9/11ಎ/11ಬಿ) ಈ ಕೆಳಗಿನ ಆಸ್ತಿಗಳನ್ನು ಪಟ್ಟಿ ಮಾಡಬೇಕು:
  1. ಸರ್ಕಾರಿ / ಅರಣ್ಯ / ಸ್ಥಳೀಯ ನಿಕಾಯಗಳ ಭೂಮಿ: RTC ಕಾಲಂ 9 ರಲ್ಲಿ ಗ್ರಾಮಠಾಣಾ, ಭೀಮನ್, ಪ್ರಧಾನರು, ತಾ.ಪಂ/ಜಿ.ಪಂ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮ ಬಡಾವಣೆ ಎಂದು ನಮೂದಾಗಿದ್ದು, ಯಾವುದೇ ಅಧಿಕೃತ ಹಕ್ಕುಪತ್ರ/ದಾಖಲೆಗಳಿಲ್ಲದ ಸ್ವತ್ತುಗಳು.
  2. ಡಬಲ್ ಎಂಟ್ರಿ / ನಕಲಿ ಆಸ್ತಿಗಳು (Double Entry / Duplicate Property).
  3. ನ್ಯಾಯಾಲಯದ ಆದೇಶವಿರುವ ಪ್ರಕರಣಗಳು.
  4. ಕ್ರಮಬದ್ಧವಾಗಿಲ್ಲದ ಹಕ್ಕುಪತ್ರಗಳನ್ನು ಹೊಂದಿರುವ ಆಸ್ತಿಗಳು.
  5. ಮಾಲೀಕತ್ವದ ದಾಖಲೆಗಳು ಸಂಶಯಾಸ್ಪದ ಅಥವಾ ಕಾನೂನುಬಾಹಿರವಾಗಿರುವ ಆಸ್ತಿಗಳು.
ಪ್ರಶ್ನೆ 3 ಗುರುತಿಸಿದ ಆಸ್ತಿಗಳನ್ನು ಹೇಗೆ ವರ್ಗೀಕರಿಸಬೇಕು?
ಗುರುತಿಸಲಾದ ಆಸ್ತಿಗಳನ್ನು ಕೆಳಗಿನ 3 ವಿಭಾಗಗಳಾಗಿ ಪ್ರತ್ಯೇಕಿಸಿ ಪಟ್ಟಿ ಮಾಡಬೇಕು:
  • ಈಗಾಗಲೇ ಇ-ಸ್ವತ್ತು ನಮೂನೆ ವಿತರಣೆಯಾಗಿರುವ ಆಸ್ತಿಗಳು.
  • ಇ-ಸ್ವತ್ತು ನಮೂನೆ ಇನ್ನೂ ವಿತರಣೆಯಾಗದೇ ಇರುವ ಆಸ್ತಿಗಳು.
  • ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ / ವರ್ಗಾವಣೆ / ಬ್ಯಾಂಕ್ ಅಡಮಾನವಾಗಿರುವ ಆಸ್ತಿಗಳು.
ಪ್ರಶ್ನೆ 4 ಆಸ್ತಿಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಹೇಗೆ ಪ್ರಕಟಿಸಬೇಕು?
  • ಸಿದ್ಧಪಡಿಸಿದ ಪಟ್ಟಿಯನ್ನು ಗ್ರಾಮ ಪಂಚಾಯಿತಿ ಸೂಚನಾ ಫಲಕ, ಸ್ಥಳೀಯ ದಿನಪತ್ರಿಕೆ ಮತ್ತು ಧ್ವನಿವರ್ಧಕದ (ಟಾಂಟಾಂ) ಮೂಲಕ ಸಾರ್ವಜನಿಕವಾಗಿ ಪ್ರಚುರಪಡಿಸಬೇಕು.
  • ಪ್ರತಿಯೊಬ್ಬ ಆಸ್ತಿಯ ಅಧಿಭೋಗದಾರರಿಗೆ ಪ್ರತ್ಯೇಕವಾಗಿ ವೈಯಕ್ತಿಕ ಲಿಖಿತ ನೋಟಿಸ್ ಜಾರಿ ಮಾಡಬೇಕು.
ಪ್ರಶ್ನೆ 5 ನೋಟಿಸ್‌ನಲ್ಲಿ ಯಾವ ಅಂಶಗಳು ಕಡ್ಡಾಯವಾಗಿ ನಮೂದಾಗಿರಬೇಕು?
ನೋಟಿಸ್‌ನಲ್ಲಿ ಈ 3 ವಿವರಗಳು ಇರಲೇಬೇಕು:
  • ಆಸ್ತಿಯನ್ನು ಕರ ನಿರ್ಧರಣೆಯಿಂದ ಕೈಬಿಡಲು ಕಾರಣ.
  • ದಾಖಲೆಗಳನ್ನು ಸಲ್ಲಿಸಲು ಬೇಕಾದ ವಿವರ.
  • ಮೇಲ್ಮನವಿ ಪ್ರಾಧಿಕಾರದ ಸಂಪೂರ್ಣ ಮಾಹಿತಿ.
ಪ್ರಶ್ನೆ 6 ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರಿಗೆ ಎಷ್ಟು ದಿನಗಳ ಕಾಲಾವಕಾಶವಿರುತ್ತದೆ?
ನೋಟಿಸ್ ತಲುಪಿದ ದಿನಾಂಕದಿಂದ 15 ದಿನಗಳ ಒಳಗೆ ಸಂಬಂಧಪಟ್ಟ ವ್ಯಕ್ತಿಗಳು ಸೂಕ್ತ ದಾಖಲೆಗಳೊಂದಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸಬೇಕು.
ಪ್ರಶ್ನೆ 7 ಅರ್ಜಿ ಸ್ವೀಕರಿಸಿದ ನಂತರ PDO ಅವರು ಕೈಗೊಳ್ಳಬೇಕಾದ ಕ್ರಮಗಳೇನು?
  • ಪಿಡಿಒ ಅವರು ಸ್ಥಳ ತನಿಖೆ (Spot Inspection) ನಡೆಸಿ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು.
  • ಅಗತ್ಯವಿದ್ದಲ್ಲಿ ತಾಲೂಕು ಕಚೇರಿಯ ಭೂಮಾಪಕರಿಂದ (Surveyor) ಸ್ಥಳದ ದೃಢೀಕರಣ ಪಡೆಯಬೇಕು.
  • ದಾಖಲೆಗಳು ಸರಿ ಇದ್ದರೆ: ಆಸ್ತಿಯನ್ನು ಕರ ನಿರ್ಧರಣಾ ಪಟ್ಟಿಯಲ್ಲಿ ಮುಂದುವರಿಸಬಹುದು.
  • ದಾಖಲೆಗಳು ಸರಿಯಿಲ್ಲದಿದ್ದರೆ: ಸ್ಥಳ ತನಿಖಾ ಮಹಜರು ಮತ್ತು ಭೂಮಾಪನಾ ವರದಿಯೊಂದಿಗೆ ಇ-ಸ್ವತ್ತು 2.0 ತಂತ್ರಾಂಶದ ಮೂಲಕ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿಗಳಿಗೆ (DS) ಪ್ರಸ್ತಾವನೆ ವರ್ಗಾಯಿಸಬೇಕು.
ಪ್ರಶ್ನೆ 8 ಪಂಚತಂತ್ರ 2.0 ನಲ್ಲಿದ್ದು, ಇ-ಸ್ವತ್ತಿನಲ್ಲಿ ಕರಡು (Draft) ಇರುವ ಆಸ್ತಿಗಳ ಬಗ್ಗೆ ಏನು ಮಾಡಬೇಕು?
ಆಸ್ತಿಯು ಪಂಚತಂತ್ರ 2.0 ನಲ್ಲಿದ್ದು, ಇ-ಸ್ವತ್ತು ನಮೂನೆ ಇನ್ನೂ ಕರಡು ಹಂತದಲ್ಲಿದ್ದರೆ, ಇ-ಸ್ವತ್ತು 2.0 ನಲ್ಲಿ ಪ್ರಕಟಿಸಲಾಗಿರುವ ಕರಡು (Draft) ನಮೂನೆಯನ್ನು ಆಯ್ಕೆ ಮಾಡಿಕೊಂಡು ಜಿ.ಪಂ ಉಪಕಾರ್ಯದರ್ಶಿಗಳಿಗೆ ರದ್ದತಿಗಾಗಿ ವರ್ಗಾಯಿಸಬೇಕು. ಅಲ್ಲದೆ ಅಂತಹ ಆಸ್ತಿಗಳಿಗೆ ಪಂಚತಂತ್ರ 2.0 ನಲ್ಲಿ ಇನ್ನು ಮುಂದೆ ಯಾವುದೇ ತೆರಿಗೆ ನಿರ್ಧರಿಸಬಾರದು.
ಪ್ರಶ್ನೆ 9 ಇ-ಸ್ವತ್ತು ನಮೂನೆ ರದ್ದುಪಡಿಸಲು ಸಾರ್ವಜನಿಕರು ನೇರವಾಗಿ ಅರ್ಜಿ ಸಲ್ಲಿಸಬಹುದೇ?
ಹೌದು. ಇ-ಸ್ವತ್ತು ನಮೂನೆಗಳನ್ನು ರದ್ದುಪಡಿಸಲು ಸಾರ್ವಜನಿಕರು ನೇರವಾಗಿ ಸಾರ್ವಜನಿಕ ಲಾಗಿನ್ (Public Login) ಮೂಲಕ ಅಥವಾ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬಹುದು. ಪಿಡಿಒ ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಉಪಕಾರ್ಯದರ್ಶಿಗಳಿಗೆ ವರ್ಗಾಯಿಸುತ್ತಾರೆ.
ಪ್ರಶ್ನೆ 10 ರದ್ದತಿ ಪ್ರಸ್ತಾವನೆಯನ್ನು ಅಂತಿಮವಾಗಿ ಆದೇಶಿಸುವವರು ಯಾರು?
ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿಗಳು (Deputy Secretary) ದಾಖಲೆಗಳನ್ನು ಪರಿಶೀಲಿಸಿ, ವಿಚಾರಣೆ ನಡೆಸಿ, ಆದೇಶ ಹೊರಡಿಸುವ ಮೂಲಕ ತಂತ್ರಾಂಶದಲ್ಲಿ ನಮೂನೆಯನ್ನು ರದ್ದುಪಡಿಸಲು (Invalidate) ಅನುಮೋದಿಸುತ್ತಾರೆ.
ಪ್ರಶ್ನೆ 11 ಆಸ್ತಿಯು ಈಗಾಗಲೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿದ್ದರೆ (Registered) ಏನು ಮಾಡಬೇಕು?
  • ಕರ್ನಾಟಕ ನೋಂದಣಿ ನಿಯಮಗಳು 2025 ರ ಪ್ರಕಾರ ನೋಂದಣಿಯನ್ನು ರದ್ದುಪಡಿಸಲು ಪಿಡಿಒ ಅವರಿಗೆ ಉಪಕಾರ್ಯದರ್ಶಿಗಳು ನಿರ್ದೇಶನ ನೀಡುತ್ತಾರೆ.
  • ನೋಂದಣಿ ರದ್ದಾಗುವವರೆಗೆ ಆ PID ಅನ್ನು ತಂತ್ರಾಂಶದಲ್ಲಿ ಫ್ರೀಜ್ (Freeze) ಮಾಡಿಡಲಾಗುತ್ತದೆ.
  • ನೋಂದಣಿ ರದ್ದಾದ ಬಳಿಕವಷ್ಟೇ ಉಪಕಾರ್ಯದರ್ಶಿಗಳು PID ಅನ್ನು ಸಂಪೂರ್ಣ ರದ್ದುಪಡಿಸಿ ತರ್ಕಬದ್ಧ ಆದೇಶ ಹೊರಡಿಸುತ್ತಾರೆ.
ಪ್ರಶ್ನೆ 12 PID ರದ್ದಾದ ನಂತರ ತಂತ್ರಾಂಶದಲ್ಲಿ ಏನಾಗುತ್ತದೆ?
ರದ್ದಾದ PID ಯು ಇ-ಸ್ವತ್ತು 2.0 ಹಾಗೂ ಪಂಚತಂತ್ರ 2.0 ತಂತ್ರಾಂಶಗಳಲ್ಲಿ ಸಂಪೂರ್ಣವಾಗಿ Freeze ಆಗುತ್ತದೆ. ಆ PID ಗಳಿಗೆ ಸಂಬಂಧಿಸಿದಂತೆ ಪ್ರಿಂಟ್ ಪಡೆಯುವುದು ಹಾಗೂ ತೆರಿಗೆ ನಿರ್ಧರಿಸುವುದು ಸಂಪೂರ್ಣವಾಗಿ ಬಂದ್ ಆಗುತ್ತದೆ.
ಪ್ರಶ್ನೆ 13 ರದ್ದಾದ ಆಸ್ತಿಗಳ ಬಗ್ಗೆ PDO ಅವರು ದಾಖಲೆಗಳಲ್ಲಿ ಏನು ನಮೂದಿಸಬೇಕು?
ಉಪಕಾರ್ಯದರ್ಶಿಗಳಿಂದ ರದ್ದಾದ PID ಗೆ ಸಂಬಂಧಿಸಿದಂತೆ ಪಿಡಿಒ ಅವರು ಗ್ರಾಮ ಪಂಚಾಯಿತಿಯ ಕರ ನಿರ್ಧರಣೆ ದಾಖಲೆಗಳಲ್ಲಿ/ವಹಿಯಲ್ಲಿ ಕಡ್ಡಾಯವಾಗಿ ನಮೂದಿಸಿ ಪ್ರತ್ಯೇಕ ಕಡತವನ್ನು ಸುಸ್ಥಿತಿಯಲ್ಲಿಡಬೇಕು.
ಪ್ರಶ್ನೆ 14 ತಂತ್ರಾಂಶದಲ್ಲಿ ದಾಖಲಾಗದೇ ಕೇವಲ ಹಳೇ ಕರ ವಹಿಯಲ್ಲಿರುವ ಆಸ್ತಿಗಳನ್ನು ಕೈಬಿಡುವುದು ಹೇಗೆ?
ಯಾವುದೇ ತಂತ್ರಾಂಶದಲ್ಲಿ ದಾಖಲಾಗದೆ ಕೇವಲ ಗ್ರಾಮ ಪಂಚಾಯಿತಿಯ ಕರ ನಿರ್ಧರಣಾ ವಹಿಯಲ್ಲಿ ಮಾತ್ರ ದಾಖಲಾಗಿರುವ ಆಸ್ತಿಗಳನ್ನು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ (General Body) ನಿರ್ಣಯದನ್ವಯ ಕರ ವಹಿಯಿಂದ ಕೈಬಿಡಬೇಕು.
ಪ್ರಶ್ನೆ 15 ಉಪಕಾರ್ಯದರ್ಶಿಗಳ ರದ್ದತಿ ಆದೇಶದ ವಿರುದ್ಧ ಮೇಲ್ಮನವಿ (Appeal) ಸಲ್ಲಿಸಲು ಅವಕಾಶವಿದೆಯೇ?
ಹೌದು. ಉಪಕಾರ್ಯದರ್ಶಿಗಳ ಆದೇಶದಿಂದ ಬಾಧಿತರಾದವರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (CEO, ZP) ಮೇಲ್ಮನವಿ ಸಲ್ಲಿಸಬಹುದು. ಸಿ.ಇ.ಒ (CEO) ಅವರ ತೀರ್ಮಾನವೇ ಅಂತಿಮವಾಗಿರುತ್ತದೆ.
ಪ್ರಶ್ನೆ 16 ಕರ್ತವ್ಯ ಲೋಪದಿಂದ ಸ್ವಯಂಚಾಲಿತವಾಗಿ (Deemed Approval) ಆದ ಅಕ್ರಮ ನಮೂನೆಗಳ ಬಗ್ಗೆ ಕ್ರಮವೇನು?
ಹಿರಿಯ ಪಿಡಿಒ / ಪಿಡಿಒ / ಇಒ ಕರ್ತವ್ಯ ಲೋಪದಿಂದ ಸ್ವಯಂಚಾಲಿತವಾಗಿ (Deemed Approval) ನಿಯಮಬಾಹಿರವಾಗಿ ಸೃಜನೆಯಾದ ಪ್ರಮಾಣಪತ್ರಗಳನ್ನು ನಿಯಮ 15ರ ಅನ್ವಯ ರದ್ದುಪಡಿಸಲು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO) ಆದೇಶ ಹೊರಡಿಸಿ ಉಪಕಾರ್ಯದರ್ಶಿಗಳಿಗೆ ನಿರ್ದೇಶನ ನೀಡುತ್ತಾರೆ.

No comments:

Post a Comment