ಈ ಹಿನ್ನೆಲೆಯಲ್ಲಿ, ಗ್ರಾಮ ಪಂಚಾಯಿತಿಗಳು ಹಳೆಯ ಬೈ-ಲಾ ಅನ್ವಯ ಶುಲ್ಕ ಸಂಗ್ರಹಿಸುವುದನ್ನು ನಿಲ್ಲಿಸುವ ದಿನಾಂಕ ಹಾಗೂ ಹೊಸ ನಿಯಮಾವಳಿಗಳ ಕುರಿತ ಸಂಪೂರ್ಣ ವಿವರ ಇಲ್ಲಿದೆ:
ಆದೇಶ ಮತ್ತು ಶುಲ್ಕ ಸಂಗ್ರಹ ದಿನಾಂಕದ ಸ್ಪಷ್ಟ ವಿವರ:
(ಕರ್ನಾಟಕ ರಾಜ್ಯ ಪಿಡಿಒ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘ ಸಂಗ್ರಹಿಸಿದ ಮಾಹಿತಿ)
ಆದೇಶದ ವಿಷಯ:
ವಿಷಯ: Telecommunications (Right of Way) Rules, 2024 ನ್ನು ಅನುಷ್ಠಾನಗೊಳಿಸುವ ಬಗ್ಗೆ.
ಆದೇಶ ಸಂಖ್ಯೆ: ಆರ್‌ಡಿಪಿಆರ್ 384 ಜಿಪಿವಿ 2026, ದಿನಾಂಕ: 23.03.2026.
ಹಳೆಯ ಶುಲ್ಕ ಸಂಗ್ರಹ ನಿಲ್ಲುವ ದಿನಾಂಕ (23.03.2026 ರಿಂದ ಜಾರಿ):
ರಾಜ್ಯ ಸರ್ಕಾರವು 2021 ರಲ್ಲಿ ಜಾರಿಗೆ ತಂದಿದ್ದ ‘The Karnataka Gram Swaraj and Panchayat Raj (Gram Panchayat) Bye-Laws, 2021’ ಅನ್ನು ಅಧಿಕೃತವಾಗಿ ಹಿಂಪಡೆದಿದೆ.
ಆದ್ದರಿಂದ, ಈ ಆದೇಶ ಹೊರಡಿಸಿದ ದಿನಾಂಕವಾದ 23 ಮಾರ್ಚ್ 2026 ರಿಂದಲೇ ಗ್ರಾಮ ಪಂಚಾಯಿತಿಗಳು ಹಳೆಯ ಬೈ-ಲಾ ಪ್ರಕಾರ ನೇರವಾಗಿ ಶುಲ್ಕ ಸಂಗ್ರಹಿಸುವುದನ್ನು ನಿಲ್ಲಿಸಬೇಕು.
01.01.2025 ರಿಂದ ಪೂರ್ವಾನ್ವಯವಲ್ಲ (Retrospective ಅಲ್ಲ):
ಹೀಗಾಗಿ, 23.03.2026 ರವರೆಗೆ ಹಳೆಯ ನಿಯಮಗಳಡಿ ಸಂಗ್ರಹಿಸಲಾದ ಶುಲ್ಕಗಳು ಕ್ರಮಬದ್ಧವಾಗಿದ್ದು, ಶುಲ್ಕ ಸಂಗ್ರಹ ನಿಲ್ಲಿಸುವುದು/ಬದಲಾವಣೆ ಆಗುವುದು 23.03.2026 ರಿಂದ ಮಾತ್ರ. (ಕರ್ನಾಟಕ ರಾಜ್ಯ ಪಿಡಿಒ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘ ಸಂಗ್ರಹಿಸಿದ ಮಾಹಿತಿ)
ಕೇಂದ್ರ ಸರ್ಕಾರದ RoW ನಿಯಮಗಳು 01.01.2025 ರಿಂದ ಕೇಂದ್ರ ಮಟ್ಟದಲ್ಲಿ ಜಾರಿಗೆ ಬಂದಿದ್ದರೂ, ರಾಜ್ಯ ಸರ್ಕಾರದ ಆದೇಶದಲ್ಲಿ ಯಾವುದೇ ಪೂರ್ವಾನ್ವಯ ದಿನಾಂಕವನ್ನು ನಮೂದಿಸಿಲ್ಲ. (ಕರ್ನಾಟಕ ರಾಜ್ಯ ಪಿಡಿಒ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘ ಸಂಗ್ರಹಿಸಿದ ಮಾಹಿತಿ)
ಅನುಸೂಚಿ-IV ತಿದ್ದುಪಡಿ ಕಾಯ್ದಿರಿಸುವಿಕೆ:
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಅನುಸೂಚಿ-IV ರಡಿ ಶುಲ್ಕಗಳನ್ನು ಪರಿಷ್ಕರಿಸುವ ಕಾಯ್ದೆ ತಿದ್ದುಪಡಿಯನ್ನು ಕಾಯ್ದಿರಿಸಿ, ಸದ್ಯಕ್ಕೆ 2021ರ ಬೈ-ಲಾವನ್ನು ರದ್ದುಪಡಿಸಲಾಗಿದೆ.
'ಗತಿಶಕ್ತಿ ಸಂಚಾರ್' ಪೋರ್ಟಲ್ ಬಳಕೆ ಕಡ್ಡಾಯ: (ಕರ್ನಾಟಕ ರಾಜ್ಯ ಪಿಡಿಒ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘ ಸಂಗ್ರಹಿಸಿದ ಮಾಹಿತಿ)
ಇನ್ನು ಮುಂದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೊಬೈಲ್ ಟವರ್ ನಿರ್ಮಾಣ, ನೆಲದ ಮೇಲಿನ ಹಾಗೂ ಭೂಗತ ಕೇಬಲ್ ಅಳವಡಿಕೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳು, ಅನುಮೋದನೆಗಳು ಮತ್ತು ಸೇವೆಗಳನ್ನು ಕಡ್ಡಾಯವಾಗಿ ಭಾರತ ಸರ್ಕಾರದ GatiShakti Sanchar (

No comments:
Post a Comment