ಅರ್ಜಿ ಸಲ್ಲಿಸಲು ಅಧಿಕೃತ ಲಿಂಕ್: Registration
ಆನ್ಲೈನ್ ನೋಂದಣಿ ಪ್ರಕ್ರಿಯೆಯ ಹಂತಗಳು
ಹಂತ 1: ವೆಬ್ಸೈಟ್ ಲಾಗಿನ್
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಮೊಬೈಲ್ಗೆ ಬರುವ ಒಟಿಪಿ (OTP) ದಾಖಲಿಸಿ ಲಾಗಿನ್ ಆಗಿ.
ಹಂತ 2: ಆಧಾರ್ ಇ-ಕೆವೈಸಿ (Aadhaar KYC)
ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
OTP ಆಯ್ಕೆಯನ್ನು ಕ್ಲಿಕ್ ಮಾಡಿ.
ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ ದೃಢೀಕರಿಸಿ.
ಹಂತ 3: ವೈಯಕ್ತಿಕ ವಿವರ ಮತ್ತು ಭಾವಚಿತ್ರ
ಅಗತ್ಯವಿರುವ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.
ವೆಬ್ಕ್ಯಾಮ್/ಕ್ಯಾಮೆರಾ ಮೂಲಕ ನಿಮ್ಮ ಲೈವ್ ಫೋಟೋ ಸೆರೆಹಿಡಿಯಿರಿ (Capture Photo).
ಹಂತ 4: ವಿಳಾಸ ಮತ್ತು ಚಟುವಟಿಕೆಗಳ ಆಯ್ಕೆ
ನಿಮ್ಮ ವಾಸಸ್ಥಳದ ಪ್ರಕಾರ ನಗರ (Urban) ಅಥವಾ ಗ್ರಾಮೀಣ (Rural) ಆಯ್ಕೆಮಾಡಿ.
ನಿಮ್ಮ ಜಿಲ್ಲೆ, ವಿಧಾನಸಭಾ ಕ್ಷೇತ್ರ, ಸ್ಥಳೀಯ ಸಂಸ್ಥೆ (ULB/GP) ಹಾಗೂ ವಾರ್ಡ್/ಗ್ರಾಮವನ್ನು ಆಯ್ಕೆಮಾಡಿ.
ಪಟ್ಟಿಯಲ್ಲಿ ಲಭ್ಯವಿರುವ ಆಯ್ಕೆಗಳಿಂದ ನಿಮಗೆ ಆಸಕ್ತಿಯಿರುವ 3 ಚಟುವಟಿಕೆಗಳನ್ನು ಆರಿಸಿಕೊಳ್ಳಿ.
ಹಂತ 5: ಶುಲ್ಕ ಪಾವತಿ ಮತ್ತು ಗುರುತಿನ ಚೀಟಿ
ನಮೂದಿಸಿದ ವಿವರಗಳನ್ನು ಪರಿಶೀಲಿಸಿ ಶುಲ್ಕ ಪಾವತಿಗೆ ಮುಂದುವರಿಯಿರಿ.
ಆನ್ಲೈನ್ ಮೂಲಕ ನಿಗದಿತ ಶುಲ್ಕವನ್ನು ಪಾವತಿಸಿ.
ಪಾವತಿ ಯಶಸ್ವಿಯಾದ ಬಳಿಕ ನಿಮ್ಮ ಡಿಜಿಟಲ್ ಐಡಿ ಕಾರ್ಡ್ (ID Card) ಡೌನ್ಲೋಡ್ ಮಾಡಿಕೊಳ್ಳಿ.
📌 ಮುಖ್ಯ ಸೂಚನೆ: ಅರ್ಜಿಯ ಪ್ರತಿ ಹಂತವನ್ನು ಪೂರ್ಣಗೊಳಿಸಿದ ನಂತರ ಮುಂದಿನ ಹಂತಕ್ಕೆ ತೆರಳಲು ಕಡ್ಡಾಯವಾಗಿ ‘Save and Next’ ಬಟನ್ ಕ್ಲಿಕ್ ಮಾಡಿ.
No comments:
Post a Comment