ಬೆಂಗಳೂರು:
ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ನೇರ ನೇಮಕಾತಿ ಪ್ರಕ್ರಿಯೆಯನ್ನು ಮತ್ತಷ್ಟು ವ್ಯವಸ್ಥಿತಗೊಳಿಸುವ ಉದ್ದೇಶದಿಂದ ‘ಕರ್ನಾಟಕ ನಾಗರಿಕ ಸೇವೆಗಳು (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021’ಕ್ಕೆ ಮಹತ್ವದ ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ
ಸಾರ್ವಜನಿಕರು ಅಥವಾ ಬಾಧಿತ ವ್ಯಕ್ತಿಗಳು ಈ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ, ರಾಜ್ಯಪತ್ರ ಪ್ರಕಟವಾದ 15 ದಿನಗಳ ಒಳಗಾಗಿ ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ವಿಧಾನ ಸೌಧ, ಬೆಂಗಳೂರು ಇವರಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ
ಕರಡು ತಿದ್ದುಪಡಿಯ ಪ್ರಮುಖ ಮುಖ್ಯಾಂಶಗಳು:
ಎಫ್‌ಡಿಎ ಮತ್ತು ಎಸ್‌ಡಿಎ ಹುದ್ದೆಗಳಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿ:
ಸಹಾಯಕ / ಪ್ರಥಮ ದರ್ಜೆ ಸಹಾಯಕ (FDA) ಅಥವಾ ಸಮಾನ ಹುದ್ದೆಗಳು: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Bachelor's Degree) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಕನಿಷ್ಠ ಅರ್ಹತೆಯನ್ನಾಗಿ ನಿಗದಿಪಡಿಸಲಾಗಿದೆ
. ಕಿರಿಯ ಸಹಾಯಕ / ದ್ವಿತೀಯ ದರ್ಜೆ ಸಹಾಯಕ (SDA) ಅಥವಾ ಸಮಾನ ಹುದ್ದೆಗಳು: ಪದವಿ ಪೂರ್ವ ಪರೀಕ್ಷೆ (PUC) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಕನಿಷ್ಠ ವಿದ್ಯಾರ್ಹತೆಯಾಗಿ ನಿಗದಿಪಡಿಸಲಾಗಿದೆ
.
ಹುದ್ದೆಗಳ ಆದ್ಯತಾ ಕ್ರಮ (Post Preferences) ಆಯ್ಕೆಗೆ ಅವಕಾಶ: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಂದರ್ಭದಲ್ಲೇ ತಾವು ಬಯಸುವ ಹುದ್ದೆ ಅಥವಾ ಸೇವೆಗಳ ಆದ್ಯತೆಯ ಕ್ರಮವನ್ನು (Order of preference) ಸ್ಪಷ್ಟವಾಗಿ ನಮೂದಿಸಬೇಕು
. ನೇಮಕಾತಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸುವಾಗ ಅಭ್ಯರ್ಥಿ ನೀಡಿದ ಆದ್ಯತೆ ಹಾಗೂ ಮೆರಿಟ್ ಮತ್ತು ಮೀಸಲಾತಿ ನಿಯಮಗಳನ್ನು ಪರಿಗಣಿಸಲಾಗುತ್ತದೆ . ಗ್ರೂಪ್-ಸಿ (ತಾಂತ್ರಿಕ) ಹುದ್ದೆಗಳ ಪರೀಕ್ಷಾ ವಿಧಾನ ಹಾಗೂ ನೆಗೆಟಿವ್ ಅಂಕ:
ಗ್ರೂಪ್-ಸಿ ತಾಂತ್ರಿಕ ಹುದ್ದೆಗಳಿಗೆ ತಲಾ 100 ಅಂಕಗಳ ಒಟ್ಟು 200 ಅಂಕಗಳ ಎರಡು ಕಡ್ಡಾಯ ಪತ್ರಿಕೆಗಳಿರುತ್ತವೆ
. ಪ್ರತಿ ತಪ್ಪಾದ ಉತ್ತರಕ್ಕೆ ನಾಲ್ಕನೇ ಒಂದು ಭಾಗದಷ್ಟು (1/4th ಅಥವಾ 0.25) ಋಣಾತ್ಮಕ ಅಂಕ (Negative Marking) ಕಡಿತಗೊಳಿಸಲಾಗುತ್ತದೆ
. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಅಭ್ಯರ್ಥಿಯು ಒಟ್ಟು ಅಂಕಗಳಲ್ಲಿ ಕನಿಷ್ಠ ಶೇಕಡಾ 35 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ
. ಪ್ರತಿ ಪತ್ರಿಕೆಯ ಪರೀಕ್ಷಾ ಅವಧಿ ಗರಿಷ್ಠ 120 ನಿಮಿಷಗಳು (2 ಗಂಟೆ) ಆಗಿರುತ್ತದೆ
.
ಹೆಚ್ಚುವರಿ ಪಟ್ಟಿ (Additional List) ಬಳಕೆ: ಆಯ್ಕೆಯಾದ ಅಭ್ಯರ್ಥಿ ಅನರ್ಹಗೊಂಡರೆ ಅಥವಾ ನಿಗದಿತ ಕಾಲಮಿತಿಯಲ್ಲಿ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ, ನೇಮಕಾತಿ ಪ್ರಾಧಿಕಾರವು ಅದೇ ಲಂಬ ಹಾಗೂ ಸಮತಳ ಮೀಸಲಾತಿ ವರ್ಗದ ಅಭ್ಯರ್ಥಿಯನ್ನು ಹೆಚ್ಚುವರಿ ಪಟ್ಟಿಯಿಂದ ನಿಯೋಜಿಸಿಕೊಳ್ಳಲು ಅವಕಾಶ ನೀಡಲಾಗಿದೆ
. ರಾಜ್ಯದ ಯಾವುದೇ ಭಾಗದಲ್ಲಿ ಸೇವೆ ಕಡ್ಡಾಯ: ಅಭ್ಯರ್ಥಿಗಳು ಅರ್ಜಿಯಲ್ಲಿ ಯಾವುದೇ ಆದ್ಯತೆ ನೀಡಿದ್ದರೂ ಸಹ, ಈ ನಿಯಮಗಳ ಅಡಿಯಲ್ಲಿ ನೇಮಕಗೊಂಡ ನೌಕರರು ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಾದರೂ ಸೇವೆ ಸಲ್ಲಿಸಲು ಬಾಧ್ಯರಾಗಿರುತ್ತಾರೆ
.
No comments:
Post a Comment