ಕರ್ನಾಟಕ ರಾಜ್ಯ ಪಿಡಿಒ ಬಿ ಗ್ರೇಡ್ ಸಂಘ
ಇ-ಗ್ರಾಮ್ ಸ್ವರಾಜ್ ಪೋರ್ಟಲ್‌ನಲ್ಲಿ 16ನೇ ಹಣಕಾಸು ಆಯೋಗದ GPDP ಯೋಜನೆ ಅಪ್‌ಲೋಡ್ ಮಾಡುವ ಹಂತ-ಹಂತದ ಮಾರ್ಗದರ್ಶಿ
ಪ್ರಮುಖ ನಿಯಮಗಳು ಮತ್ತು ಸಿದ್ಧತೆಗಳು
- ಬಜೆಟ್ ಮಿತಿ: ರಿಸೋರ್ಸ್ ಎನ್ವಲಪ್‌ನಲ್ಲಿ ಲಭ್ಯವಿರುವ ಬಜೆಟ್‌ನ ಗರಿಷ್ಠ 120% ವರೆಗೆ ಮಾತ್ರ ಯೋಜನೆ ರೂಪಿಸಲು ಅವಕಾಶವಿದೆ.
- ರಸ್ತೆ ಕಾಮಗಾರಿಗಳ ಮಿತಿ: ಒಟ್ಟು ಅನ್‌ಟೈಡ್ ಫಂಡ್‌ನ (Untied Fund) ಗರಿಷ್ಠ 20% ಮೊತ್ತವನ್ನು ಮಾತ್ರ ರಸ್ತೆ ನಿರ್ಮಾಣ ಅಥವಾ ದುರಸ್ತಿಗೆ ಬಳಸಬೇಕು.
- ಸಂಕಲ್ಪ ಥೀಮ್: ಅನ್‌ಟೈಡ್ ಫಂಡ್‌ನ ಶೇ. 25% ರಷ್ಟು ಹಣವನ್ನು ಆಯ್ದ ಸಂಕಲ್ಪ ಥೀಮ್‌ನ ಕಾಮಗಾರಿಗಳಿಗೆ ಮೀಸಲಿಡಬೇಕು.
- ಫ್ಲ್ಯಾಗ್‌ಶಿಪ್ ಯೋಜನೆಗಳು: ಕೇಂದ್ರ ಸರ್ಕಾರದ 22 ಫ್ಲ್ಯಾಗ್‌ಶಿಪ್ ಯೋಜನೆಗಳನ್ನು ಪ್ಲಾನ್‌ನಲ್ಲಿ ನಮೂದಿಸುವುದು ಕಡ್ಡಾಯ.
- VPRP ಪ್ಲಾನ್: ಕನಿಷ್ಠ 1 VPRP ಚಟುವಟಿಕೆಯನ್ನು ಯೋಜನೆಯಲ್ಲಿ ಸೇರಿಸುವುದು ಕಡ್ಡಾಯವಾಗಿದೆ.
ಹಂತ 1 ಪ್ರೊಫೈಲ್ ಸ್ಥಿತಿ ಪರಿಶೀಲನೆ (Profile Status Check)
- ಗ್ರಾಮ ಪಂಚಾಯತಿಯ ಅಡ್ಮಿನ್ ಲಾಗಿನ್ ಮೂಲಕ e-Gram Swaraj ಪೋರ್ಟಲ್‌ಗೆ ಪ್ರವೇಶಿಸಿ.
- Profile Management ಗೆ ತೆರಳಿ ಗ್ರಾಮ ಪಂಚಾಯತಿಯ ಪ್ರೊಫೈಲ್ ಅಪ್‌ಡೇಟ್ ಆಗಿ Approved ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ (ಪ್ರೊಫೈಲ್ ಅನುಮೋದನೆಯಾಗದಿದ್ದರೆ ಮುಂದೆ ಸಾಗಲು ಸಾಧ್ಯವಿಲ್ಲ).
ಹಂತ 2 ರಿಸೋರ್ಸ್ ಎನ್ವಲಪ್ ಬಜೆಟ್ ನಮೂದಿಸುವುದು (Resource Envelope)
- ಮೆನುವಿನಲ್ಲಿ Fund/Resource Envelope ಆಯ್ಕೆಮಾಡಿ Expected Fund Allocation ಕ್ಲಿಕ್ ಮಾಡಿ.
- 16ನೇ ಹಣಕಾಸು ಆಯೋಗದ Basic Grant (Tied & Untied) ಮೊತ್ತವನ್ನು ಪರಿಶೀಲಿಸಿ.
- ಇತರ ಇಲಾಖಾ ಯೋಜನೆಗಳು ಹಾಗೂ ಪಂಚಾಯತಿಯ ಸ್ವಂತ ಆದಾಯದ (Own Funds / OSR) ಮೊತ್ತವನ್ನು ನಮೂದಿಸಿ Save ಮಾಡಿ.
ಹಂತ 3 ಚಟುವಟಿಕೆಗಳ ನೋಂದಣಿ (Register Activities)
- Panchayat Development Plan ಗೆ ತೆರಳಿ ಚಟುವಟಿಕೆಗಳನ್ನು ಎರಡು ವಿಧಗಳಲ್ಲಿ ನೋಂದಾಯಿಸಿ: • Theme-wise: 9 ಥೀಮ್‌ಗಳ ಆಧಾರದ ಮೇಲೆ ಚಟುವಟಿಕೆ ಆರಿಸಲು. • PAI Indicator-wise: ಹಿಂದುಳಿದ ಸೂಚಕಗಳನ್ನು ಸುಧಾರಿಸಲು ಬೇಕಾದ ಚಟುವಟಿಕೆಗಳನ್ನು ಸೇರಿಸಲು.
- ಕಾಮಗಾರಿಯ ವಿವರಣೆ, ಪೂರ್ಣಗೊಳಿಸುವ ಅವಧಿ, ಫಲಾನುಭವಿಗಳ ಸಂಖ್ಯೆ ಹಾಗೂ ಅಂದಾಜು ವೆಚ್ಚವನ್ನು ದಾಖಲಿಸಿ.
- Activity Output ನಲ್ಲಿ ಆಸ್ತಿಯ ವಿವರಗಳನ್ನು (ರಸ್ತೆ ಉದ್ದ, ಪ್ರತಿ ಮೀಟರ್ ವೆಚ್ಚ, ಗ್ರಾಮದ ಹೆಸರು ಇತ್ಯಾದಿ) ಭರ್ತಿ ಮಾಡಿ Save & Forward ಕ್ಲಿಕ್ ಮಾಡಿ.
ಹಂತ 4 22 ಫ್ಲ್ಯಾಗ್‌ಶಿಪ್ ಯೋಜನೆಗಳನ್ನು ಸೇರಿಸುವುದು (Flagship Schemes)
- ಮುಖ್ಯ ಕಾಮಗಾರಿಗಳ ಜೊತೆಗೆ ಕೇಂದ್ರ ಸರ್ಕಾರದ 22 ಫ್ಲ್ಯಾಗ್‌ಶಿಪ್ ಯೋಜನೆಗಳನ್ನು (ಉದಾ: ಜಲ ಜೀವನ್ ಮಿಷನ್) ಪ್ರತ್ಯೇಕವಾಗಿ ಸೇರಿಸಿ.
- ಸಂಬಂಧಿತ ಥೀಮ್ ಅಡಿಯಲ್ಲಿ ಆಯಾ ಚಟುವಟಿಕೆಯನ್ನು ಆಯ್ಕೆಮಾಡಿ.
- ಫಂಡಿಂಗ್ ವಿವರಗಳಲ್ಲಿ "Is this activity directly funded by Panchayat?" ಎಂಬಲ್ಲಿ No ಎಂದು ಆಯ್ಕೆಮಾಡಿ.
- ಡ್ರಾಪ್‌ಡೌನ್ ಮೆನುವಿನಿಂದ ಸೂಕ್ತ ಫ್ಲ್ಯಾಗ್‌ಶಿಪ್ ಯೋಜನೆಯ ಹೆಸರನ್ನು ಆಯ್ಕೆ ಮಾಡಿ Save & Forward ಮಾಡಿ.
ಹಂತ 5 ಯೋಜನೆಗೆ ಹಣ ಹಂಚಿಕೆ ಮಾಡುವುದು (Fund Allocation)
- Panchayat Development Plan ಅಡಿಯಲ್ಲಿ Register Plan ಆಯ್ಕೆಮಾಡಿ.
- ಪ್ರತಿ ಕಾಮಗಾರಿಯ ಮುಂಭಾಗವಿರುವ Action -> Fund Allocation ಕ್ಲಿಕ್ ಮಾಡಿ.
- 16ನೇ ಹಣಕಾಸು ಆಯೋಗ (Tied/Untied) ಅಥವಾ ಸ್ವಂತ ನಿಧಿಯಿಂದ ನಿಗದಿತ ಮೊತ್ತವನ್ನು ನಮೂದಿಸಿ Allocate ಮಾಡಿ.
- ಡೇಟಾ ಕಳೆದುಹೋಗದಂತೆ ಆಗಾಗ Save ಮಾಡುತ್ತಿರಿ (ನಂತರ ಬದಲಾವಣೆಗಳಿಗೆ Manage Plan ಬಳಸಿ).
ಹಂತ 6 ಗ್ರಾಮಸಭಾ ಠರಾವು ಮತ್ತು ಗುಣಮಟ್ಟ ಪರಿಶೀಲನೆ (Quality Score)
- ಗ್ರಾಮಸಭೆಯಲ್ಲಿ ಅನುಮೋದನೆ ಪಡೆದ ಠರಾವು ಪ್ರತಿಯನ್ನು PDF ಮಾದರಿಯಲ್ಲಿ (2 MB ಒಳಗೆ) ಅಪ್‌ಲೋಡ್ ಮಾಡಿ.
- Save and Forward to Approval ಕ್ಲಿಕ್ ಮಾಡಿ.
- ಪರದೆಯ ಮೇಲೆ ಬರುವ GPDP Quality Score ಪರಿಶೀಲಿಸಿ (75% ಕ್ಕಿಂತ ಹೆಚ್ಚಿನ ಅಂಕ ಇರುವುದು ಉತ್ತಮ). ಸರಿಯಾಗಿದ್ದರೆ Approve Plan ಕ್ಲಿಕ್ ಮಾಡಿ.
ಹಂತ 7 ಅಂತಿಮ ಅನುಮೋದನೆ (Final Approval)
- ಮೆನುವಿನಲ್ಲಿ Manage Plan ಗೆ ಹೋಗಿ, Plan Status ನಲ್ಲಿ Plan Pending for Approval ಆಯ್ಕೆಮಾಡಿ Get Data ಕ್ಲಿಕ್ ಮಾಡಿ.
- ನಂತರ Approve ಬಟನ್ ಕ್ಲಿಕ್ ಮಾಡಿ, ಗ್ರಾಮಸಭೆ ಅನುಮೋದಿಸಿದ ದಿನಾಂಕವನ್ನು ನಮೂದಿಸಿ Save ಮಾಡಿ.
- ಇದರೊಂದಿಗೆ ಇ-ಗ್ರಾಮ್ ಸ್ವರಾಜ್ ಪೋರ್ಟಲ್‌ನಲ್ಲಿ GPDP ಯೋಜನೆಯು ಸಂಪೂರ್ಣವಾಗಿ ಅಪ್‌ಲೋಡ್ ಆಗುತ್ತದೆ.
No comments:
Post a Comment