KSPDO B GRADE

ಸಂಘ / Association
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು
Karnataka State PDO B-Grade Upgradation Association (R), Bengaluru
ನೋಂದಣಿ ಸಂಖ್ಯೆ: DRB4/SOR/420/2023-24
Registration Number: DRB4/SOR/420/2023-24
ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ
Registered under Karnataka Co-operative Societies Act, 1960
ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ
State President: Sri Ramesh Nadageri
ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್
State Vice-President: Sri Jayagouda Patil
ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ
Women Vice-President: Smt. Sridevi Madiwalar

Live

MENU BAR

ಜಿಲ್ಲಾಧ್ಯಕ್ಷರು
1. ಬೆಂಗಳೂರು ನಗರ: ಶ್ರೀ ಧನಂಜಯ್ [ಬೆಂಗಳೂರು ವಿಭಾಗ]
2. ಬೆಂಗಳೂರು ಗ್ರಾಮಾಂತರ: ಶ್ರೀ ಸತೀಶ್ [ಬೆಂಗಳೂರು ವಿಭಾಗ]
3. ರಾಮನಗರ: ಶ್ರೀ ರವಿ.ಎನ್ [ಬೆಂಗಳೂರು ವಿಭಾಗ]
4. ಕೋಲಾರ: ಶ್ರೀ ಮೊಹನ್ ಕುಮಾರ್ [ಬೆಂಗಳೂರು ವಿಭಾಗ]
5. ಚಿಕ್ಕಬಳ್ಳಾಪೂರ: ಶ್ರೀ ಚಂದ್ರಶೇಖರ.G.W [ಬೆಂಗಳೂರು ವಿಭಾಗ]
6. ತುಮಕೂರು: ಶ್ರೀ ಜುಂಜೇಗೌಡ [ಬೆಂಗಳೂರು ವಿಭಾಗ]
7. ಶಿವಮೊಗ್ಗ: ಶ್ರೀ ಚಿದಾನಂದ [ಬೆಂಗಳೂರು ವಿಭಾಗ]
8. ದಾವಣಗೆರೆ: ಶ್ರೀ ಜಯಕುಮಾರ್‌ ಡಿ.ಆರ್ [ಬೆಂಗಳೂರು ವಿಭಾಗ]
9. ಚಿತ್ರದುರ್ಗ: ಶ್ರೀ ನಾಗರಾಜ ಜಿ [ಬೆಂಗಳೂರು ವಿಭಾಗ]
10. ಮೈಸೂರು: ಶ್ರೀ ಗೋಪಾಲ ಕೃಷ್ಣಾ [ಮೈಸೂರು ವಿಭಾಗ]
11. ಮಂಡ್ಯ: ಶ್ರೀ ಲವ. ಎನ್ [ಮೈಸೂರು ವಿಭಾಗ]
12. ಹಾಸನ: ಶ್ರೀ ಮಂಜುನಾಥ [ಮೈಸೂರು ವಿಭಾಗ]
13. ಚಾಮರಾಜನಗರ: ಶ್ರೀ ಸಿದ್ಧರಾಜು [ಮೈಸೂರು ವಿಭಾಗ]
14. ದಕ್ಷಿಣ ಕನ್ನಡ: ಶ್ರೀ ಮುತ್ತಪ್ಪ [ಮೈಸೂರು ವಿಭಾಗ]
15. ಉಡುಪಿ: ಶ್ರೀ ಗೀರಿಶ್ [ಮೈಸೂರು ವಿಭಾಗ]
16. ಚಿಕ್ಕಮಗಳೂರು: ಶ್ರೀ ವಿಶ್ವನಾಥಯ್ಯ [ಮೈಸೂರು ವಿಭಾಗ]
17. ಕೊಡಗು: ಶ್ರೀ ಪುಟ್ಟರಾಜು [ಮೈಸೂರು ವಿಭಾಗ]
18. ಬೆಳಗಾವಿ: ಶ್ರೀ ರವಿಕಾಂತ್ CM [ಬೆಳಗಾವಿ ವಿಭಾಗ]
19. ಧಾರವಾಡ: ಶ್ರೀ ಪರುಶುರಾಮ ಕವಲೂರು [ಬೆಳಗಾವಿ ವಿಭಾಗ]
20. ವಿಜಯಪುರ: ಶ್ರೀ ಬಸನಗೌಡ ಚೌದ್ರಿ [ಬೆಳಗಾವಿ ವಿಭಾಗ]
21. ಬಾಗಲಕೋಟೆ: ಶ್ರೀ ಸಿದ್ಧು ಬಿರದಾರ [ಬೆಳಗಾವಿ ವಿಭಾಗ]
22. ಗದಗ: ಶ್ರೀ ಸಂತೋಷ ಹೆಚ್‌ [ಬೆಳಗಾವಿ ವಿಭಾಗ]
23. ಹಾವೇರಿ: ಶ್ರೀ ಭೋಜರಾಜ [ಬೆಳಗಾವಿ ವಿಭಾಗ]
24. ಉತ್ತರ ಕನ್ನಡ: ಶ್ರೀ ಗೀರಿಶ್ [ಬೆಳಗಾವಿ ವಿಭಾಗ]
25. ಕಲಬುರ್ಗಿ: ಶ್ರೀ ರಾಜೇಶ್ವರಿ ಸಾಹು [ಕಲಬುರ್ಗಿ ವಿಭಾಗ]
26. ಬೀದರ್: ಶ್ರೀ ಚಂದ್ರಶೇಖರ ಬನ್ನಾಳೆ [ಕಲಬುರ್ಗಿ ವಿಭಾಗ]
27. ರಾಯಚೂರು: ಶ್ರೀ‌ ಸಿ.ಹೆಚ್ ಮುದಕಪ್ಪ [ಕಲಬುರ್ಗಿ ವಿಭಾಗ]
28. ಕೊಪ್ಪಳ: ಶ್ರೀ ವಿರೇಶ್.G.A [ಕಲಬುರ್ಗಿ ವಿಭಾಗ]
29. ಯಾದಗಿರಿ: ಶ್ರೀ ಮಲ್ಲಣ್ಣ ಮಾಳೂರು [ಕಲಬುರ್ಗಿ ವಿಭಾಗ]
31. ವಿಜಯನಗರ: ಶ್ರೀ ನವೀನಕುಮಾರ್ ಆರ್‌ ಡಿ [ಕಲಬುರ್ಗಿ ವಿಭಾಗ]

Search This Blog

17 June 2026

ರಾಯಚೂರು ಜಿ.ಪಂ. ದೊಡ್ಡ ನೇಮಕಾತಿ ಪ್ರಕ್ರಿಯೆ: 41 ಸಿಬ್ಬಂದಿಗೆ ಗ್ರೇಡ್-2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ಮತ್ತು ಸ್ಥಳ ನಿಯುಕ್ತಿ

ರಾಯಚೂರು: ರಾಯಚೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಖಾಲಿ ಇದ್ದ ಗ್ರೇಡ್-2 ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಸೇವೆಯೊಳಗಿನ ನೇರ ನೇಮಕಾತಿ ಕೋಟಾದಡಿ ಯಶಸ್ವಿಯಾಗಿ ಭರ್ತಿ ಮಾಡಲಾಗಿದೆ. ಗ್ರಾಮ ಪಂಚಾಯತಿಗಳಲ್ಲಿ ಬಿಲ್ ಕಲೆಕ್ಟರ್, ಲೆಕ್ಕಿಗರು, ಗುಮಾಸ್ತರು, ಬೆರಳಚ್ಚುಗಾರರು ಮತ್ತು ಡಾಟಾ ಎಂಟ್ರಿ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅರ್ಹ ನೌಕರರಿಗೆ ಈ ಹುದ್ದೆಗಳನ್ನು ನೀಡಿ ಸ್ಥಳ ನಿಯುಕ್ತಿಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ನೇಮಕಾತಿ ಪ್ರಾಧಿಕಾರ ಹಾಗೂ ಉಪಕಾರ್ಯದರ್ಶಿಗಳು ಅಧಿಕೃತ ಆದೇಶ ಹೊರಡಿಸಿದ್ದಾರೆ.


ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ  ಅಧ್ಯಕ್ಷತೆಯಲ್ಲಿ ಜೂನ್ 17, 2026 ರಂದು ನಡೆದ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಜೇಷ್ಠತೆ ಹಾಗೂ ರೋಸ್ಟರ್ ಬಿಂದುಗಳ ಆಧಾರದ ಮೇಲೆ ಒಟ್ಟು 41 ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿ ಆದೇಶ ನೀಡಲಾಗಿದೆ. 



1. ಗ್ರೇಡ್-2 ಗ್ರಾಮ ಪಂಚಾಯತಿ ಕಾರ್ಯದರ್ಶಿ (ಒಟ್ಟು ಹುದ್ದೆಗಳು: 34)

ಈ ವೃಂದದ ಅಡಿಯಲ್ಲಿ ಒಟ್ಟು 34 ನೌಕರರನ್ನು ನೇಮಕ ಮಾಡಲಾಗಿದ್ದು, ಅವರಿಗೆ ರೂ. 34100 - 67600 ರ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.

ನಿಯುಕ್ತಿಗೊಂಡ ಅಭ್ಯರ್ಥಿಗಳ ಪಟ್ಟಿ:

ಕ್ರ.ಸಂ.ಅಭ್ಯರ್ಥಿಯ ಹೆಸರುಪ್ರವರ್ಗಸ್ಥಳ ನಿಯುಕ್ತಿಗೊಂಡ ಗ್ರಾಮ ಪಂಚಾಯತ್
1ಕಾಶಿಂಬಿ ಜಾನಸಾಬGM Fಎಲೆಕೂಡಗಿ (ತಾ: ಸಿಂಧನೂರು)
2ಪ್ರಾಣೇಶ ನೀಲಕಂಠರೆಡ್ಡಿGM PHಗೋರ್ಕಲ್ (ತಾ: ಮಾನವಿ)
3ತಿರುಪತಿ ಮರಿಯಪ್ಪGM PHಕಲಮಂಗಿ (ತಾ: ಸಿಂಧನೂರು)
4ತನುಜಾ ರಾಮಲಿಂಗಪ್ಪSTಕನ್ನಾಳ (ತಾ: ಮಸ್ಕಿ)
5ಶಿವಪ್ಪ ಅಮರಪ್ಪGMಹೆಚ್.ಸಿದ್ದಾಪೂರ (ತಾ: ದೇವದುರ್ಗ)
6ದೇವಕ್ಕೆವ್ವ ತಿಮ್ಮನಗೌಡGM Fಯದಾಪೂರ (ತಾ: ರಾಯಚೂರು)
7ರಂಜಾನಸಾಬ ಖಾಜಿಮಿಯಾGM Ruralಕೋಳಬಾಳ (ತಾ: ಮಸ್ಕಿ)
8ಶ್ರೀಧರ ರಾಮಜಿSCಬಲ್ಲಟಗಿ (ತಾ: ಸಿರವಾರ)
9ಯಲ್ಲಪ್ಪ ಭೀರಪ್ಪ2Aಸಂಗಂಕುಂಟಾ (ತಾ: ರಾಯಚೂರು)
10ಗೋವರ್ಧನ ರೆಡ್ಡಿ ಚೆನ್ನರೆಡ್ಡಿGMಬಾಗಲವಾಡ (ತಾ: ಸಿರವಾರ)
11ಕೆ.ಬಸವರಾಜ ಅಮರೇಶGMವಿರುಪಾಪೂರ (ತಾ: ಸಿಂಧನೂರು)
12ನದಿಮುಲಾ ಹುಸೇನ್ ಎಂ.ಡಿ. ಗೌಸಸಾಬ್GMಮಾಡಗಿರಿ (ತಾ: ಸಿರವಾರ)
13ಭೀಮರಾಯ ಯಲ್ಲಪ್ಪSCಅರಕೇರಾ (ತಾ: ಅರಕೇರಾ)
14ನಾಗರಾಜ ಬಸ್ಸಪ್ಪSTಹಿರೇಹಣಗಿ (ತಾ: ಸಿರವಾರ)
15ಯಮನಪ್ಪ ಬಸ್ಸಣ್ಣGM Fಗೆಜ್ಜಲಗಟಾ (ತಾ: ಲಿಂಗಸುಗೂರು)
16ಉಮೇಶಕುಮಾರ ಹೆಚ್.ಎಂ. ಬಸಯ್ಯ ಸ್ವಾಮಿGM Ruralರೋಡಲಬಂಡಾ(ತ)(ತಾ:ಲಿಂಗಸುಗೂರು)
17ಗವಿಸಿದ್ದಪ್ಪ ಸಣ್ಣ ಅಯ್ಯಪ್ಪ2A Fಬನ್ನಿಗೋಳ (ತಾ: ಲಿಂಗಸುಗೂರು)
18ಶರಣಪ್ಪ ಹನುಮಂತC1ಗಬ್ಬರು (ತಾ: ದೇವದುರ್ಗ)
19ಜಗದೀಶ ಪಂಪಯ್ಯ ಸ್ವಾಮಿGM Ruralಹಿರೇದಿನ್ನಿ (ತಾ: ಮಸ್ಕಿ)
20ತಿಮ್ಮಯ್ಯ ಹನುಮಂತಪ್ಪGM Fಮೆದಕಿನಾಳ (ತಾ: ಮಸ್ಕಿ)
21ಮಂಜುನಾಥ ಮುದುಕಪ್ಪGMಭೋಗಾವತಿ (ತಾ: ಮಾನವಿ)
22ಶರಣಪ್ಪ ಸಣ್ಣ ರಂಗಪ್ಪC1ಆಮದಿಹಾಳ (ತಾ: ಲಿಂಗಸುಗೂರು)
23ಈರಪ್ಪ ಮುದಿಯಪ್ಪSCಹೂನೂರು (ತಾ: ಲಿಂಗಸುಗೂರು)
24ಆದಿಬಸಪ್ಪ ಚಿದಾನಂದಪ್ಪGM Fಬಿ.ಗಣೇಕಲ್‌ (ತಾ: ಅರಕೇರಾ)
25ಮುದುಕನಗೌಡ ಹನುಮನಗೌಡSTಸರ್ಜಾಪೂರ (ತಾ: ಲಿಂಗಸುಗೂರು)
26ಆಂಜನೇಯ ರಾಮಯ್ಯ2Aಮಲ್ಲೇದೇವರಗುಡ್ಡ (ತಾ: ಅರಕೇರಾ)
27ಯಮನೂರಪ್ಪ ಬಸ್ಸಪ್ಪSCಗಾಣದಾಳ (ತಾ: ಅರಕೇರಾ)
28ಆಂಜಿನೇಯ ಶಿವಣ್ಣGM Fಚಿತ್ತಾಪೂರ (ತಾ: ಲಿಂಗಸುಗೂರು)
29ಅಮರೇಶ ಬಸಪ್ಪSC Fಕೆ.ಇರಬಗೇರಾ (ತಾ: ದೇವದುರ್ಗ)
30ಮಹಮ್ಮದ್ ಮೌಲಾ ಅಬ್ದುಲ್ ಖಾದ‌ರ್2Bಮಲದಕಲ್ (ತಾ: ಅರಕೇರಾ)
31ರಂಗಪ್ಪ ಸುಕುಮುನಿಯಪ್ಪSCಜಾಗೀರ ಜಾಡಲದಿನ್ನಿ(ತಾ: ಅರಕೇರಾ)
32ಜೊಸೇಫ್ ಮರಿಸ್ವಾಮಿSCಕಪಗಲ್ (ತಾ: ಮಾನವಿ)
33ಮಲ್ಲಿಕಾರ್ಜುನ ಯಮನಪ್ಪC1ಬಾಯಿದೊಡ್ಡಿ (ತಾ: ರಾಯಚೂರು)
34ಶಿವರಾಜ ಗಂಗಪ್ಪSTಯಾಪಲದಿನ್ನಿ (ತಾ: ರಾಯಚೂರು)

2. ದ್ವಿತೀಯ ದರ್ಜೆ ಲೆಕ್ಕ ಸಹಾಯಕ (ಒಟ್ಟು ಹುದ್ದೆಗಳು: 7)

ಈ ವೃಂದದ ಅಡಿಯಲ್ಲಿ ಒಟ್ಟು 7 ಅಭ್ಯರ್ಥಿಗಳನ್ನು ರೂ. 34100 - 67600 ರ ವೇತನ ಶ್ರೇಣಿಯೊಂದಿಗೆ ನೇಮಕ ಮಾಡಲಾಗಿದೆ.

ನಿಯುಕ್ತಿಗೊಂಡ ಅಭ್ಯರ್ಥಿಗಳ ಪಟ್ಟಿ:

ಕ್ರ.ಸಂ.ಅಭ್ಯರ್ಥಿಯ ಹೆಸರುಪ್ರವರ್ಗಸ್ಥಳ ನಿಯುಕ್ತಿಗೊಂಡ ಗ್ರಾಮ ಪಂಚಾಯತ್
1ತಾಯಪ್ಪ ಶಾಮಲಪ್ಪSCಸಂಗಾಪೂರ (ತಾ: ಮಾನವಿ)
2ಸೈಯದ್ ಜುಬೇರ ಸೈಯದ ಆಜಮ್GMನವಲಕಲ್ (ತಾ: ಸಿರವಾರ)
3ಮಲ್ಲಿಕಾರ್ಜುನ ಶಿವರೆಡ್ಡಪ್ಪ ಗೌಡGMದೊಂಡಂಬಳಿ (ತಾ: ದೇವದುರ್ಗ)
4ನಾಗಪ್ಪ ದುರುಗಪ್ಪSCಭೂತಲದಿನ್ನಿ (ತಾ: ಸಿಂಧನೂರು)
5ಕರಿಪಲ್ಲಿ ನಂದಯ್ಯ ಅರ್ಜುನSCಗುಂಡಾ (ತಾ: ಮಸ್ಕಿ)
6ರಂಗನಾಥ ಆದಪ್ಪSCಸೋಮನಮರಡಿ (ತಾ: ದೇವದುರ್ಗ)
7ಹೊನ್ನಪ್ಪ ಬಸ್ಸಪ್ಪSTಗುರುಗುಂಟಾ (ತಾ: ಲಿಂಗಸುಗೂರು)

ಪ್ರಮುಖ ನಿಯಮಗಳು ಮತ್ತು ಷರತ್ತುಗಳು:

  • ಕಡ್ಡಾಯ ಪರೀಕ್ಷೆಗಳು: ನೇಮಕಗೊಂಡ ಎಲ್ಲಾ ಅಭ್ಯರ್ಥಿಗಳು 2 ವರ್ಷಗಳ ಪರೀಕ್ಷಾರ್ಥ ಅವಧಿಯಲ್ಲಿರುತ್ತಾರೆ. ಈ ಅವಧಿಯಲ್ಲಿ ಕರ್ನಾಟಕ ಸಿವಿಲ್ ಸೇವೆಗಳು ನಿಯಮಗಳು 1977 ರನ್ವಯ ಕನ್ನಡ ಭಾಷಾ ಪರೀಕ್ಷೆ, ಇಲಾಖಾ ಪರೀಕ್ಷೆಗಳಾದ ಅಕೌಂಟ್ಸ್ ಲೋಯರ್, ಕಮ್ಯೂನಿಟಿ ಡೆವಲಪ್‌ಮೆಂಟ್ ಭಾಗ-1 ಮತ್ತು ಭಾಗ-2 ಹಾಗೂ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಕಡ್ಡಾಯವಾಗಿ ಪಾಸ್ ಮಾಡಬೇಕಿರುತ್ತದೆ.

  • ಬೇಬಾಕಿ ಪ್ರಮಾಣ ಪತ್ರ: ಅಭ್ಯರ್ಥಿಗಳು ಹೊಸ ಹುದ್ದೆಗೆ ವರದಿ ಮಾಡಿಕೊಳ್ಳುವ ಮುನ್ನ, ತಾವು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಪಂಚಾಯತಿಯ ಎಲ್ಲಾ ದಾಖಲೆಗಳನ್ನು ಹಸ್ತಾಂತರಿಸಿರುವ ಮತ್ತು ಯಾವುದೇ ಹಣಕಾಸಿನ ಬಾಕಿ ಇಲ್ಲದಿರುವ ಕುರಿತು ಪಂಚಾಯತಿ ಅಭಿವೃದ್ಧಿ ಅಧಿಕಾರಿಯಿಂದ  ಪಡೆದ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

  • ವರ್ಗಾವಣೆ ಮತ್ತು ಕನಿಷ್ಠ ಸೇವೆ: ಇವು ಜಿಲ್ಲಾ ವೃಂದದ ಹುದ್ದೆಗಳಾಗಿದ್ದರಿಂದ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆಗೆ ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ನಿಯುಕ್ತಿಗೊಂಡ ಗ್ರಾಮ ಪಂಚಾಯತಿಯಲ್ಲಿ ಕನಿಷ್ಠ 3 ವರ್ಷಗಳ ಅವಧಿಗೆ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು.

  • ಪಿಂಚಣಿ ಯೋಜನೆ: ದಿನಾಂಕ: 01-04-2006 ರ ನಂತರ ನಾಗರಿಕ ಸೇವೆಗೆ ಸೇರಿದ ನೌಕರರಾಗಿರುವುದರಿಂದ ಇವರಿಗೆ ಸರ್ಕಾರದ ಆದೇಶದಂತೆ ಹೊಸ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅನ್ವಯವಾಗುತ್ತದೆ.

  • ದಾಖಲೆಗಳ ನೈಜತೆ: ಅಭ್ಯರ್ಥಿಗಳು ಸಲ್ಲಿಸಿದ ಮೀಸಲಾತಿ ಪ್ರಮಾಣ ಪತ್ರ, ನಡತೆ ಪ್ರಮಾಣ ಪತ್ರ, ವೈದ್ಯಕೀಯ ದೈಹಿಕ ಸಾಮರ್ಥ್ಯ ಪತ್ರ ಹಾಗೂ SSLC/PUC ಅಂಕಪಟ್ಟಿಗಳ ನೈಜತೆಯ ದೃಢೀಕರಣಕ್ಕೆ ಈ ನೇಮಕಾತಿ ಒಳಪಟ್ಟಿರುತ್ತದೆ. ಒಂದು ವೇಳೆ ಯಾವುದೇ ದಾಖಲೆಗಳು ಸುಳ್ಳು ಎಂದು ಕಂಡುಬಂದಲ್ಲಿ ಮುನ್ಸೂಚನೆ ಇಲ್ಲದೆ ನೇಮಕಾತಿ ರದ್ದುಪಡಿಸಿ, ವೇತನ ವಸೂಲಿ ಮಾಡಲಾಗುವುದು.

No comments:

Post a Comment