KSPDO B GRADE

ಸಂಘ / Association
ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ-ಗ್ರೇಡ್ ಹುದ್ದೆ ಉನ್ನತೀಕರಣ ಸಂಘ (ರಿ), ಬೆಂಗಳೂರು
Karnataka State PDO B-Grade Upgradation Association (R), Bengaluru
ನೋಂದಣಿ ಸಂಖ್ಯೆ: DRB4/SOR/420/2023-24
Registration Number: DRB4/SOR/420/2023-24
ಇದು 1960ರ ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಅಧಿಕೃತ ಸಂಘ
Registered under Karnataka Co-operative Societies Act, 1960
ರಾಜ್ಯಾಧ್ಯಕ್ಷರು: ಶ್ರೀ ರಮೇಶ ನಡಗೇರಿ
State President: Sri Ramesh Nadageri
ರಾಜ್ಯ ಉಪಾಧ್ಯಕ್ಷರು: ಶ್ರೀ ಜಯಗೌಡ ಪಾಟಿಲ್
State Vice-President: Sri Jayagouda Patil
ಮಹಿಳಾ ಉಪಾಧ್ಯಕ್ಷರು: ಶ್ರೀದೇವಿ ಮಡಿವಾಳರ
Women Vice-President: Smt. Sridevi Madiwalar

Live

MENU BAR

ಜಿಲ್ಲಾಧ್ಯಕ್ಷರು
1. ಬೆಂಗಳೂರು ನಗರ: ಶ್ರೀ ಧನಂಜಯ್ [ಬೆಂಗಳೂರು ವಿಭಾಗ]
2. ಬೆಂಗಳೂರು ಗ್ರಾಮಾಂತರ: ಶ್ರೀ ಸತೀಶ್ [ಬೆಂಗಳೂರು ವಿಭಾಗ]
3. ರಾಮನಗರ: ಶ್ರೀ ರವಿ.ಎನ್ [ಬೆಂಗಳೂರು ವಿಭಾಗ]
4. ಕೋಲಾರ: ಶ್ರೀ ಮೊಹನ್ ಕುಮಾರ್ [ಬೆಂಗಳೂರು ವಿಭಾಗ]
5. ಚಿಕ್ಕಬಳ್ಳಾಪೂರ: ಶ್ರೀ ಚಂದ್ರಶೇಖರ.G.W [ಬೆಂಗಳೂರು ವಿಭಾಗ]
6. ತುಮಕೂರು: ಶ್ರೀ ಜುಂಜೇಗೌಡ [ಬೆಂಗಳೂರು ವಿಭಾಗ]
7. ಶಿವಮೊಗ್ಗ: ಶ್ರೀ ಚಿದಾನಂದ [ಬೆಂಗಳೂರು ವಿಭಾಗ]
8. ದಾವಣಗೆರೆ: ಶ್ರೀ ಜಯಕುಮಾರ್‌ ಡಿ.ಆರ್ [ಬೆಂಗಳೂರು ವಿಭಾಗ]
9. ಚಿತ್ರದುರ್ಗ: ಶ್ರೀ ನಾಗರಾಜ ಜಿ [ಬೆಂಗಳೂರು ವಿಭಾಗ]
10. ಮೈಸೂರು: ಶ್ರೀ ಗೋಪಾಲ ಕೃಷ್ಣಾ [ಮೈಸೂರು ವಿಭಾಗ]
11. ಮಂಡ್ಯ: ಶ್ರೀ ಲವ. ಎನ್ [ಮೈಸೂರು ವಿಭಾಗ]
12. ಹಾಸನ: ಶ್ರೀ ಮಂಜುನಾಥ [ಮೈಸೂರು ವಿಭಾಗ]
13. ಚಾಮರಾಜನಗರ: ಶ್ರೀ ಸಿದ್ಧರಾಜು [ಮೈಸೂರು ವಿಭಾಗ]
14. ದಕ್ಷಿಣ ಕನ್ನಡ: ಶ್ರೀ ಮುತ್ತಪ್ಪ [ಮೈಸೂರು ವಿಭಾಗ]
15. ಉಡುಪಿ: ಶ್ರೀ ಗೀರಿಶ್ [ಮೈಸೂರು ವಿಭಾಗ]
16. ಚಿಕ್ಕಮಗಳೂರು: ಶ್ರೀ ವಿಶ್ವನಾಥಯ್ಯ [ಮೈಸೂರು ವಿಭಾಗ]
17. ಕೊಡಗು: ಶ್ರೀ ಪುಟ್ಟರಾಜು [ಮೈಸೂರು ವಿಭಾಗ]
18. ಬೆಳಗಾವಿ: ಶ್ರೀ ರವಿಕಾಂತ್ CM [ಬೆಳಗಾವಿ ವಿಭಾಗ]
19. ಧಾರವಾಡ: ಶ್ರೀ ಪರುಶುರಾಮ ಕವಲೂರು [ಬೆಳಗಾವಿ ವಿಭಾಗ]
20. ವಿಜಯಪುರ: ಶ್ರೀ ಬಸನಗೌಡ ಚೌದ್ರಿ [ಬೆಳಗಾವಿ ವಿಭಾಗ]
21. ಬಾಗಲಕೋಟೆ: ಶ್ರೀ ಸಿದ್ಧು ಬಿರದಾರ [ಬೆಳಗಾವಿ ವಿಭಾಗ]
22. ಗದಗ: ಶ್ರೀ ಸಂತೋಷ ಹೆಚ್‌ [ಬೆಳಗಾವಿ ವಿಭಾಗ]
23. ಹಾವೇರಿ: ಶ್ರೀ ಭೋಜರಾಜ [ಬೆಳಗಾವಿ ವಿಭಾಗ]
24. ಉತ್ತರ ಕನ್ನಡ: ಶ್ರೀ ಗೀರಿಶ್ [ಬೆಳಗಾವಿ ವಿಭಾಗ]
25. ಕಲಬುರ್ಗಿ: ಶ್ರೀ ರಾಜೇಶ್ವರಿ ಸಾಹು [ಕಲಬುರ್ಗಿ ವಿಭಾಗ]
26. ಬೀದರ್: ಶ್ರೀ ಚಂದ್ರಶೇಖರ ಬನ್ನಾಳೆ [ಕಲಬುರ್ಗಿ ವಿಭಾಗ]
27. ರಾಯಚೂರು: ಶ್ರೀ‌ ಸಿ.ಹೆಚ್ ಮುದಕಪ್ಪ [ಕಲಬುರ್ಗಿ ವಿಭಾಗ]
28. ಕೊಪ್ಪಳ: ಶ್ರೀ ವಿರೇಶ್.G.A [ಕಲಬುರ್ಗಿ ವಿಭಾಗ]
29. ಯಾದಗಿರಿ: ಶ್ರೀ ಮಲ್ಲಣ್ಣ ಮಾಳೂರು [ಕಲಬುರ್ಗಿ ವಿಭಾಗ]
31. ವಿಜಯನಗರ: ಶ್ರೀ ನವೀನಕುಮಾರ್ ಆರ್‌ ಡಿ [ಕಲಬುರ್ಗಿ ವಿಭಾಗ]

Search This Blog

19 June 2026

ಪ್ರೀತಿಯನ್ನು ಇಂದೇ ಹಂಚಿಕೊಳ್ಳಿ

ನಾನು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿದ್ದಾಗ, ದಿನಪತ್ರಿಕೆಯ ಮುಖಪುಟದಲ್ಲಿ ಬಂದಿದ್ದ ಒಂದು ಜಾಹೀರಾತನ್ನು ಗಮನಿಸಿದೆ. ಅದು ಯಾವುದೇ ವಸ್ತುವಿನ ಅಥವಾ ಸಂಸ್ಥೆಯ ಪ್ರಚಾರದ ಜಾಹೀರಾತಾಗಿರಲಿಲ್ಲ; ಬದಲಿಗೆ ಅದೊಂದು ಪತ್ರವಾಗಿತ್ತು. ನಾನು ಆ ಪತ್ರವನ್ನು ಓದುತ್ತಾ ಹೋದೆ. ಓದಿ ಮುಗಿಸುವಷ್ಟರಲ್ಲಿ ನನಗರಿವಿಲ್ಲದಂತೆ ನನ್ನ ಕಣ್ಣುಗಳು ಒದ್ದೆಯಾಗಿದ್ದವು. 

ಆ ಪತ್ರ ನನ್ನ ಜೀವನಕ್ಕೇ ಒಂದು ಹೊಸ ದರ್ಶನವನ್ನು ನೀಡಿತು.

ಅದು ಒಬ್ಬ ತಾಯಿ ಇಡೀ ಜಗತ್ತನ್ನುದ್ದೇಶಿಸಿ ಬರೆದ ಪತ್ರವಾಗಿತ್ತು. ಅದರ ಆರಂಭ ಹೀಗಿತ್ತು:

 "ನನ್ನ ಪ್ರಿಯ ಓದುಗರೇ, ನಾನು ಈಗ ತಾನೇ ನನ್ನ ಏಕೈಕ ಮಗ ಜಿಮ್‌ನ ಅಂತ್ಯಸಂಸ್ಕಾರ ಮುಗಿಸಿ, ಅವನ ಸಮಾಧಿಯ ಬಳಿಯಿಂದ ಬಂದಿದ್ದೇನೆ. ಅವನಿಗೆ ಕೇವಲ ಇಪ್ಪತ್ತು ವರ್ಷ ವಯಸ್ಸಾಗಿತ್ತು."

ನನಗೆ ಆಶ್ಚರ್ಯವಾಯಿತು! ಯಾವ ತಾಯಿ ತಾನೇ ಮಗನ ಸಾವಿನ ಬಗ್ಗೆ ಹೀಗೆ ಬರೆಯಲು ಸಾಧ್ಯ? ಪತ್ರ ಮುಂದುವರಿದಿತ್ತು:

"ನನ್ನ ಮಗ ಶಾಲೆಯಲ್ಲಿದ್ದಾಗ ಚೆನ್ನಾಗಿ ಓದಲು ಸಾಧ್ಯವಾಗಲಿಲ್ಲ. ತುಂಬಾ ಕಷ್ಟಪಟ್ಟು, ಸ್ನೇಹಿತರು ಹಾಗೂ ಶಿಕ್ಷಕರ ಸಹಾಯದಿಂದ ಹೇಗೋ ಹೈಸ್ಕೂಲು ಶಿಕ್ಷಣ ಮುಗಿಸಿದ. ನಂತರ ಒಂದು ಕೆಲಸವನ್ನೂ ಗಿಟ್ಟಿಸಿಕೊಂಡ. ನಿಜ ಹೇಳಬೇಕೆಂದರೆ, ಅವನ ವಿಚಿತ್ರ ಬಟ್ಟೆಗಳು, ಕೇಶವಿನ್ಯಾಸ ಮತ್ತು ಅವನ ಕೋಣೆಯಿಂದ ಸದಾ ಕೇಳಿಬರುತ್ತಿದ್ದ ಜೋರಾದ ರೇಡಿಯೋದ ಸದ್ದು ನನಗೆ ಇಷ್ಟವಾಗುತ್ತಿರಲಿಲ್ಲ. ಆದರೆ ಈಗ ಅದಕ್ಕೆಲ್ಲ ಯಾವ ಅರ್ಥವೂ ಇಲ್ಲ, ಏಕೆಂದರೆ ನನ್ನ ಮಗನೇ ಈಗ ನನ್ನೊಂದಿಗಿಲ್ಲ.

ನಿನ್ನೆಯ ದಿನ ನನ್ನ ಮಗ ಕೆಲಸಕ್ಕೆ ಹೋಗುವಾಗ ರಾತ್ರಿ ಎಂಟು ಗಂಟೆಗೆ ಮನೆಗೆ ಬರುವುದಾಗಿ ಹೇಳಿದ್ದ. ಆದರೆ ಅದೆಲ್ಲಿಂದಲೋ ನನಗೆ ಸಂಜೆ 7:30ಕ್ಕೆ ಫೋನ್ ಮಾಡಿ, 'ಅಮ್ಮಾ, ನನಗೋಸ್ಕರ ಊಟಕ್ಕೆ ಕಾಯಬೇಡ. ನನಗೆ ಇನ್ನೊಂದು ಕೆಲಸವಿದೆ, ನೀನು ಊಟ ಮಾಡಿಬಿಡು' ಎಂದ. ನಾನು 'ನಿನಗಾಗಿ ಕಾಯುತ್ತೇನೆ' ಎಂದು ಹೇಳುವುದನ್ನೂ ಅವನು ಕೇಳಿಸಿಕೊಳ್ಳಲಿಲ್ಲ. ಮುಂದುವರಿದು, 'ಅಮ್ಮಾ, ಇನ್ನೊಂದು ವಿಷಯ ನಿನಗೆ ಹೇಳಲೇಬೇಕು. ಎಷ್ಟೋ ದಿನಗಳಿಂದ ಅಂದುಕೊಂಡಿದ್ದ ಮಾತು ಇಂದು ಮನಸ್ಸಿಗೆ ಬಂದುಬಿಟ್ಟಿದೆ. 

ಅಮ್ಮಾ, ನಿನ್ನಂತಹ ತಾಯಿ ಈ ಪ್ರಪಂಚದಲ್ಲೇ ಇಲ್ಲ. ನನಗಾಗಿ ನೀನು ಎಷ್ಟು ಕಷ್ಟಪಟ್ಟಿದ್ದೀಯಾ? ಎಷ್ಟು ಅಪಮಾನಗಳನ್ನು ಸಹಿಸಿದ್ದೀಯಾ? ನನ್ನನ್ನು ಒಬ್ಬ ಒಳ್ಳೆಯ ಮನುಷ್ಯನನ್ನಾಗಿ ಮಾಡಲು ಅದೆಷ್ಟು ಸಂಕಟಪಟ್ಟಿದ್ದೀಯಾ? ನಾನು ಇಡೀ ಜಗತ್ತನ್ನೇ ಹುಡುಕಾಡಿದರೂ ನಿನ್ನಂತಹ ತಾಯಿಯನ್ನು ಪಡೆಯಲು ಸಾಧ್ಯವಿಲ್ಲ. ಆಯ್ತು ಅಮ್ಮಾ, ರಾತ್ರಿ ಬರುತ್ತೇನೆ' ಎಂದವನೇ ಫೋನ್ ಇಟ್ಟುಬಿಟ್ಟ.

ನಾನೂ ಅವನಿಗೆ ಹೇಳಬೇಕೆಂದಿದ್ದೆ—'ಮಗೂ, ನೀನೂ ಸಹ ಒಬ್ಬ ಅದ್ಭುತ ಮಗ. ನೀನು ನನಗೆ ನೀಡಿದ ಸಂತೋಷ ಅಷ್ಟಿಷ್ಟಲ್ಲ' ಎಂದು. ಆದರೆ ಅಷ್ಟರಲ್ಲೇ ಅವನು ಫೋನ್ ಕಟ್ ಮಾಡಿದ್ದ ಹೊರಟುಹೋಗಿದ್ದ.
ಒಂದು ಗಂಟೆಯ ನಂತರ, ನನ್ನ ಮಗನ ಮೋಟಾರ್ ಸೈಕಲ್ ಭೀಕರ ಅಪಘಾತಕ್ಕೆ ಈಡಾಗಿದೆ ಎಂಬ ಸುದ್ದಿ ಬಂದಿತು. ತಕ್ಷಣ ಅವನನ್ನು ಜೋಹಾನ್ಸ್‌ಬರ್ಗ್ ಆಸ್ಪತ್ರೆಗೆ ಸೇರಿಸಿದೆವು. ಆದರೆ ನನ್ನ ಮಗ ಅಂದಿನಿಂದ ಬೆಳಗಿನವರೆಗೂ ಸಾವಿನೊಡನೆ ಹೋರಾಡಿ, ಕೊನೆಗೆ ಬೆಳಿಗ್ಗೆ ಹತ್ತು ಗಂಟೆಗೆ ಸಾವಿಗೆ ಶರಣಾದ.

ನನ್ನ ಮಗ ಕೊನೆಯ ಬಾರಿ ಫೋನಿನಲ್ಲಿ ಹೇಳಿದ ಮಾತುಗಳು ನಾನು ಬದುಕಿರುವವರೆಗೂ ನನ್ನ ಮನಸ್ಸಿನಲ್ಲಿ ಗುಣುಗುಣಿಸುತ್ತಿರುತ್ತವೆ. ನನ್ನ ಬದುಕಿಗೆ ಆ ನೆನಪೇ ಸಾಕು. ಆದರೆ ನನ್ನ ಪ್ರೀತಿಯ ಮಾತುಗಳನ್ನು ಅವನಿಗೆ ಕೊನೆಗೊಮ್ಮೆ ಹೇಳಲಾಗಲಿಲ್ಲವಲ್ಲ ಎಂಬ ಕೊರಗು ಮಾತ್ರ ನನ್ನಲ್ಲಿ ಎಂದಿಗೂ ಉಳಿದುಹೋಯಿತು.

ನಾನು ಈ ಪತ್ರವನ್ನು ನಿಮಗೇಕೆ ಬರೆಯುತ್ತಿದ್ದೇನೆ ಗೊತ್ತೇ? ನನ್ನ ಮಗನಿಗೆ ನನ್ನ ಮೆಚ್ಚುಗೆಯ ಮಾತನ್ನು ಹೇಳಲು ಈಗ ನನ್ನ ಬಳಿ ಸಮಯವಿಲ್ಲ (ಅವನೂ ಇಲ್ಲ). ಆದರೆ ಸ್ನೇಹಿತರೇ, ನಿಮ್ಮ ಬಳಿ ಇನ್ನೂ ಸಮಯವಿದೆ. ಸಮಯವಿರುವಾಗಲೇ ನಿಮ್ಮ ಹೆಂಡತಿ, ಗಂಡ, ತಂದೆ, ತಾಯಿ, ತಮ್ಮ, ತಂಗಿ, ಅಣ್ಣ—ಹೀಗೆ ಎಲ್ಲರಿಗೂ ನಿಮ್ಮ ಪ್ರೀತಿಯನ್ನು ತಿಳಿಸಿ. ಇಂದೇ ಹೇಳಿ, ಏಕೆಂದರೆ ನಾಳೆ ಬಹುಶಃ ನಿಮಗೆ ಈ ಸಾಧ್ಯತೆ ಸಿಗದೇ ಇರಬಹುದು.

It may be too late tomorrow!)*

No comments:

Post a Comment